ಚಿಕ್ಕಮಗಳೂರು : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದ ಶ್ರೀವಿಕ್ ನಿತಿನ್.

189
Firstsuddi

ಚಿಕ್ಕಮಗಳೂರು : ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ಅಧ್ಬುತ ಪ್ರತಿಭೆ ಪ್ರದರ್ಶಿಸುವ ಮೂಲಕ ನಗರದ ಶ್ರೀ ವೆಂಕಟೇಶ್ವರ ಫ್ರೇಮ್ ವರ್ಕ್ಸ್ ನ ಮಾಲೀಕ ಎಂ.ಎಲ್.ವೆಂಕಟೇಶಮೂರ್ತಿ ಹಾಗೂ ಶೋಭಾ ದಂಪತಿಯ ಮೊಮ್ಮಗ ಎರಡುವರೆ ವರ್ಷದ ಶ್ರೀವಿಕ್ ನಿತಿನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾನೆ.

ನಿತಿನ್ ಹಾಗೂ ನರ್ತನ ಅವರ ಪುತ್ರನಾಗಿರುವ ಶ್ರೀವಿಕ್ ನಿತಿನ್ ಸ್ಪರ್ಧೆಯಲ್ಲಿ 8 ವಿಧವಾದ ವಿದ್ಯುತ್ ಉಪಕರಣಗಳು. 8 ವಿಧವಾದ ಬಣ್ಣಗಳು, 17 ವಿವಿಧ ತರಕಾರಿಗಳು, 14 ವಾಹನಗಳು, 15 ಬಗೆಯ ಹಣ್ಣುಗಳು, 6 ರೀತಿಯ ಲೇಖನ ಸಾಮಾಗ್ರಿ, 8 ಮಾನವನ ಅಂಗಾಂಗಳು, 7 ರೀತಿಯ ಜಲಚರ ಪ್ರಾಣಿಗಳು, 7 ಸಹಾಯಕರು, 14 ಕಾಡು ಪ್ರಾಣಿಗಳು, 8 ರಾಷ್ಟ್ರೀಯ ಚಿಹ್ನೆಗಳು ಮತ್ತು ನರ್ಸರಿ ರೈಮ್ಸ್ ಶಿಶು ಗೀತೆಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದಾನೆ.