ಚಿಕ್ಕಮಗಳೂರು : ಕ್ರಿಶ್ಚಿಯನ್ ವಿವಿದೋದ್ದೇಶ ಸಹಕಾರ ಸಂಘಕ್ಕೆ ಪ್ರಶಸ್ತಿ…

202
firstsuddi

ಚಿಕ್ಕಮಗಳೂರು : 66ನೇ ಅಖಿಲ ಭಾರತ ಸಹಕಾರ ಸಪ್ತಾಹ 2019ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಎಂದು ನಗರದ ಕ್ರಿಶ್ಚಿಯನ್ ವಿವಿದೋದ್ದೇಶ ಸಹಕಾರ ಸಂಘಕ್ಕೆ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಕರ್ನಾಟಕ ರಾಜ್ಯ ಸಹಕಾರ ಮಂಡಲ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವ್ಯವಸ್ಥಾಪಕ ಎಸ್.ಎಲ್.ಧರ್ಮೇಗೌಡ ಇವರಿಂದ ಪ್ರಶಸ್ತಿ ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಸಂಘದ ಪರವಾಗಿ ಸಂಘದ ಉಪಾಧ್ಯಕ್ಷ ಫೆಲಿಕ್ಸ್ ಸ್ವಿಕೇರ ಹಾಗೂ ಕಾರ್ಯದರ್ಶಿ ಶ್ರೀಮತಿ ಶಶಿರೇಖ ಪ್ರಶಸ್ತಿ ಸ್ವೀಕರಿಸಿದರು.
ಸಹಕಾರ ಸಂಘದ ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ವಿ.ಟಿ.ಥಾಮಸ್, ರೂಬೆನ್ ಮೋಸಸ್, ಸಲ್ವಾದೋರ್ ಪಾಯ್ಸ್, ಕ್ರಿಸ್ಟೋಪರ್ ಜಾರ್ಜ್, ರೊನಾಲ್ಟ್ ಸೆರಾವೊ ಹಾಜರಿದ್ದರು.