ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮುಂದಿನ 5 ದಿನ ಭಾರಿ ಮಳೆ ಸಾಧ್ಯತೆ- ಹವಾಮಾನ ತಜ್ಞ ಪ್ರವೀಣ್ ಕೆ. ಎಂ.

673
firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಆಗಸ್ಟ್ 04 ರಿಂದ ಆಗಸ್ಟ್ 08 ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞ ಪ್ರವೀಣ್ ಕೆ. ಎಂ ತಿಳಿಸಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಅವರು ಹೆಚ್ಚಿನ ಮಳೆಯ ಜೊತೆಗೆ ಸರಾಸರಿ ಗಾಳಿಯ ವೇಗವು ಅಧಿಕವಾಗಿರುವ ಸಂಭವವಿದೆ. ಆದ್ದರಿಂದ ಸಾಮಾನ್ಯ ಜನರು ಹಾಗೂ ರೈತರು ಎಚ್ಚರಿಕೆಯಿಂದ ಇರಬೇಕು. ಜನರು ಮಳೆಯ ಬಗ್ಗೆ ಎಚ್ಚರಿಕೆ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯವಾಗಿದೆ. ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ ಸಲಹೆಯಂತೆ ಜನರು ಹಾಗೂ ರೈತರು ಎಚ್ಚರಿಕೆ ವಹಿಸಿದ್ದೇ ಆದಲ್ಲಿ ಆಗುವ ಅನಾಹುತ ಹಾಗೂ ಕಷ್ಟ-ನಷ್ಟಗಳನ್ನು ಆದಷ್ಟು ತಗ್ಗಿಸ ಬಹುದಾಗಿದೆ. ಪ್ರಸ್ತುತವಾಗಿ ರೈತರು ಕೃಷಿ ಚಟುವಟಿಕೆಗಳನ್ನು ಮುಂದಿನ 10 ದಿನಗಳ ವರೆಗೆ ಮುಂದೂಡುವುದು ಸೂಕ್ತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.