ಚಿಕ್ಕಮಗಳೂರು : ತಾ.ಪಂ. ಅಧ್ಯಕ್ಷ ನಟ್ಟೇಕೇರನಹಳ್ಳಿ ಜಯಣ್ಣ ಅವರಿಂದ ಜಿಲ್ಲಾ ಜಾನಪದ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ…

197
firstsuddi

ಚಿಕ್ಕಮಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ತಾಲ್ಲೂಕಿನ ಕೆ.ಬಿ.ಹಾಳ್‍ನಲ್ಲಿ ಫೆ.9 ರಂದು ಆಯೋಜಿಸಿರುವ ಜಿಲ್ಲಾ ಜಾನಪದ ಉತ್ಸವದ ಆಹ್ವಾನ ಪತ್ರಿಕೆಯನ್ನು ನಗರದ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ನಟ್ಟೇಕೇರನಹಳ್ಳಿ ಜಯಣ್ಣ ಗುರುವಾರ ಬಿಡುಗಡೆ ಮಾಡಿದರು. ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಉತ್ಸವ ಸಮಿತಿಯ ಮುಖಂಡರಾದ ಕೆ.ಎಸ್.ಸತ್ಯಮೂರ್ತಿ, ಬಿಳಗಲಿ ನಾಗರಾಜ್, ಆರ್.ಲೋಹಿತ್ ಕುಮಾರ್, ಟಿ.ಸಂದೀಪ್ ಹಾಜರಿದ್ದರು.