ಚಿಕ್ಕಮಗಳೂರು : ತಾಯಿ ಗಂಡ ಕೆಲಸ ಅಂದರೆ ಏನೂ? ಇದು ಸಿ.ಟಿ. ರವಿ ಸಂಸ್ಕೃತಿಇರಬೇಕು : ಮಾಜಿ ಸಿಎಂ ಸಿದ್ದರಾಮಯ್ಯ…

350

ಚಿಕ್ಕಮಗಳೂರು : ಜಾತಿ ಧರ್ಮದ ಕಾರಣಕ್ಕಾಗಿ ಬಿಜೆಪಿಗೆ ಮತ ಹಾಕದೇ ಇದ್ದರೆ ಅದು ತಾಯಿಗಂಡ ಕೆಲಸ ಎಂದು ಸಿ.ಟಿ. ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಯಿಸಿದ್ದು, ತಾಯಿ ಗಂಡ ಕೆಲಸ ಅಂದರೆ ಏನೂ? ಅಂತಾ ಸಿ.ಟಿ ರವಿ ಅವರನ್ನು ಪ್ರಶ್ನಿಸಿದ್ದು, ಇದು ಸಿಟಿ ರವಿಯ ಸಂಸ್ಕೃತಿ ಇರಬೇಕು. ಅವನು ಏನಾದರೂ ಹಾಗೇ ಆಗಿರಬೇಕು, ನನಗೆ ಗೊತ್ತಿಲ್ಲ. ಕೇರಳದಲ್ಲಿ ರಾಹುಲ್ ಗಾಂಧಿ ಅವರು ಕುಂಕುಮ ಇಟ್ಟುಕೊಂಡು ಪ್ರಚಾರ ಮಾಡಿದ್ದಕ್ಕೆ ಸಿ.ಟಿ. ರವಿ ಅವರು ಕುಂಕುಮ ಇಟ್ಟುಕೊಂಡು ರಾಹುಲ್ ಗಾಂಧಿ ಹರಕೆ ಕುರಿ ಥರಾ ಕಾಣುತ್ತಾ ಇದ್ದರು ಎಂದು ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದನಾಮ ಇಟ್ಟುಕೊಂಡವರನ್ನು ಕಂಡರೆ ನನಗೆ ಭಯ ಆಗುತ್ತೆ. ಆ ರವಿ ಇಟ್ಟುಕೊಳ್ಳುತ್ತಾನಲ್ಲ ಆ ರೀತಿ ನಾಮ ಇಟ್ಟುಕೊಳ್ಳುವವರು ನನಗೆ ರಾಕ್ಷಸರ ಹಾಗೇ ಕಾಣುತ್ತಾರೆ ಎಂದು ಹೇಳಿದರು.