ಚಿಕ್ಕಮಗಳೂರು: ಯೂತ್ ಅಪ್ಪು ಬ್ರಿಗೇಡ್ ವತಿಯಿಂದ ನಗರದ ಚಿತ್ರಮಂದಿರಕ್ಕೆ ಪುನೀತ್ ಭಾವಚಿತ್ರ ಕೊಡುಗೆ…

63
firstsuddi

ಕೊಟ್ಟಿಗೆಹಾರ: ಪುನೀತ್ ರಾಜಕುಮಾರ್ ಜನ್ಮದಿನದ ಹಿನ್ನಲೆಯಲ್ಲಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ಚಿಕ್ಕಮಗಳೂರು ನಗರದ ನಾಗಲಕ್ಷ್ಮಿ ಮತ್ತು ಶ್ರೀಲೇಖಾ ಚಿತ್ರಮಂದಿರಕ್ಕೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಯೂತ್ ಬ್ರಿಗೇಡ್ ಅಧ್ಯಕ್ಷ ಪ್ರದೀಪ್, ಸದಾ ಹಸನ್ಮುಖಿಯಾಗಿ ಸರಳತೆಯ ಪ್ರತಿರೂಪದಂತಿದ್ದ ಪುನೀತ್ ಅವರ ಸರಳತೆ ಮತ್ತು ಸ್ನೇಹಪರತೆ ಎಲ್ಲರಿಗೂ ಮಾದರಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಅಪ್ಪು ಯೂತ್ ಬ್ರಿಗೇಡ್ ಉಪಾಧ್ಯಕ್ಷ ಶಿವು, ಖಜಾಂಚಿ ಜೈರಾಮ್, ಸದಸ್ಯರಾದ ಶಶಿ ಅಪ್ಪು, ರಂಜಿತ್ ಮುಂತಾದವರು ಇದ್ದರು.