ಚಿಕ್ಕಮಗಳೂರು :ಹನುಮಂತಪ್ಪ ವೃತ್ತದ ಬಳಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ಭಕ್ತರು ಸಡಗರ, ಸಂಭ್ರಮದಿಂದ ಆಚರಿಸಿದರು…

249

ಚಿಕ್ಕಮಗಳೂರು -ನಗರದ ಹನುಮಂತಪ್ಪ ವೃತ್ತದ ಬಳಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯನ್ನು ಮಂಗಳವಾರ ಭಕ್ತರು ಸಡಗರ, ಸಂಭ್ರಮದಿಂದ ಆಚರಿಸಿದರು. ಜಯಂತಿ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿರುವ ಬಸವನ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು, ಬೆಳಗಿನಿಂದ ಸಂಜೆಯವರೆಗೆ ತಂಡೋಪ ತಂಡವಾಗಿ ಆಗಮಿಸಿದ ಲಿಂಗಾಯಿತ ಸಮುದಾಯದ ಭಕ್ತರು ನಂದಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಭಕ್ತರಿಂದ ಸಾಮೂಹಿಕ ಭಜನೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು ಮಧ್ಯಾಹ್ನದ ನಂತರ ಹಮಾಲಿ ಕಾರ್ಮಿಕರಿಂದ ವಿಶೇಷ ಪೂಜೆ ನಡೆಯಿತು.