ಚಿಕ್ಕಮಗಳೂರು : ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಅವರ ಆತ್ಮಸಾಕ್ಷಿಯ ಅಭಿವ್ಯಕ್ತಿಗಳು : ಶ್ರೀ ಡಾ|| ಬಸವ ಮರುಳಸಿದ್ದ ಸ್ವಾಮೀಜಿ.

302
firstsuddi

ಚಿಕ್ಕಮಗಳೂರು : ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಅವರ ಆತ್ಮಸಾಕ್ಷಿಯ ಅಭಿವ್ಯಕ್ತಿಗಳು ಎಂದು ವಿರಕ್ತಮಠ ಬಸವ ಮಂದಿರದ ಶ್ರೀ ಡಾ|| ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ನಗರದ ವಿರಕ್ತಮಠ ಬಸವ ಮಂದಿರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ “ವಚನ ದಿನ ” ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸವಾದಿ ಶರಣರ ವಚನಗಳು ಅನುಭವದ ಮೂಸೆಯಿಂದ ಹೊರ ಬಂದತವು, ಅವು ಸಾರ್ವಕಾಲಿಕ ಸತ್ಯಗಳು, ನಾವು ನಮ್ಮ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಆತ್ಮಶಕ್ತಿ ಜಾಗೃತವಾಗುತ್ತದೆ ಎಂದರು.
ಸವಾದಿ ಶರಣರ ವಚನಗಳನ್ನು ಬರೀ ಹೇಳಿದರಷ್ಟೇ ಅಥವಾ ಕೇಳಿದರಷ್ಟೇ ಸಾಲದು ಅವುಗಳನ್ನು ಮನನ ಮಾಡುವುದರ ಜೊತೆಗೆ ಆತ್ಮಾವಲೋಕನ ಮಾಡಿಕೊಂಡು ನಮ್ಮನ್ನು ನಾವು ತಿದ್ದಿಕೊಂಡು ನಡೆದರೆ ಅವುಗಳ ಅನುಷ್ಠಾನವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ 12ನೇ ಶತಮಾನದ ಬಸವಾದಿ ಶರಣರ ವಚನಗಳು ಇಡೀ ವಿಶ್ವಕ್ಕೆ ಆಧಾರ ಸ್ತಂಭಗಳು, ಅವುಗಳು ಮನುಕುಲಕ್ಕೆ ದಿಕ್ಸೂಚಿಯಾಗಿವೆ, ಇಂದಿನ ಸನ್ನಿವೇಶದಲ್ಲಿ ಅವುಗಳನ್ನು ಮತ್ತೆ ಓದುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ ಮನುಷ್ಯ ಮುಖವಾಡಗಳನ್ನು ಹಾಕಿಕೊಂಡು ಬದುಕುತ್ತಿರುವ ಇಂದಿನ ಸಂದರ್ಭದಲ್ಲಿ ಶರಣರ ತತ್ವ, ಚಿಂತನೆ ಮತ್ತು ವಚನಗಳ ಮರು ಓದು ಅತ್ಯಂತ ಅಗತ್ಯವಾಗಿದೆ ಎಂದರು.

ಸಮಾರಂಭಕ್ಕೆ ಮುನ್ನ ಶರಣ ಸಾಹಿತ್ಯ ಪರಿಷತ್ ನೀಡಿದ ವಚನ ಸಂಪುಟವನ್ನು ಸ್ವೀಕರಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಡಾ|| ಕೆ.ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಕಾಂಗ್ರೇಸ್ ಮುಖಂಡ ಎಂ.ಎಲ್.ಮೂರ್ತಿ, ರೈತ ಮುಖಂಡ ಗುರುಶಾಂತಪ್ಪ, ಸಿಪಿಐನ ಬಿ.ಅಮ್ಜದ್, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಲೋಕೇಶಪ್ಪ, ಬಸವ ಮಂದಿರ ಟ್ರಸ್ಟ್‍ನ ಕಾರ್ಯದರ್ಶಿ ಸಿ.ಬಿ.ಮಲ್ಲೇಗೌಡ, ಬಿಎಸ್‍ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪಿ.ವೇಲಾಯುಧನ್ ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ನಟರಾಜ್ ಸ್ವಾಗತಿಸಿದರು, ಕುಮಾರ್ ವಂದಿಸಿದರು.