ಬೆಂಗಳೂರು : ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇಗೌಡ ಅವರು ಅಪಘಾತಕ್ಕೀಡಾಗಿದ್ದಾರೆ. ನಿನ್ನೆ ಸಂಜೆ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್, ಕಾಮಿಡಿ ಕಿಲಾಡಿ ನಟ ಜಿ.ಜಿ. ಗೋವಿಂದೇಗೌಡನಿಗೆ ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ. ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ ಎಂದು ತಿಳಿಸಿದ್ದಾರೆ.
ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ..ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ… pic.twitter.com/KlnqctXII4
— ನವರಸನಾಯಕ ಜಗ್ಗೇಶ್ (@Jaggesh2) July 27, 2021
ಇದೀಗ ಗೋವಿಂದೇಗೌಡನನ್ನ ಭೇಟಿಯಾದ ಬಳಿಕ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಈಗ ತಾನೆ ಗೋವಿಂದೇಗೌಡನನ್ನ ಭೇಟಿ ಮಾಡಿದೆ. ರಾಯರ ಆಶೀರ್ವಾದದಿಂದ ಕ್ಷೇಮವಾಗಿದ್ದಾನೆ. ನಾನು, ಭಟ್ರು ಮತ್ತು ಶರಣ ಜೊತೆಗಿದ್ದೇವೆ. ನಿಮ್ಮ ಹಾರೈಕೆಯಿರಲಿ ಎಂದಿದ್ದಾರೆ.
ಈಗ ತಾನೆ ಗೋವಿಂದೇ ಗೌಡನನ್ನ ಭೇಟಿ ಮಾಡಿದೆ.. ರಾಯರ ಆಶೀರ್ವಾದದಿಂದ ಕ್ಷೇಮವಾಗಿದ್ದಾನೆ.. ನಾನು, ಭಟ್ರು ಮತ್ತು ಶರಣ ಜೊತೆಗಿದ್ದೇವೆ.. ನಿಮ್ಮ ಹಾರೈಕೆಯಿರಲಿ..🙏 pic.twitter.com/XORacsC2vr
— ನವರಸನಾಯಕ ಜಗ್ಗೇಶ್ (@Jaggesh2) July 27, 2021










