ಜ.8ಕ್ಕೆ ಕಾರ್ಮಿಕರ ಪ್ರತಿಭಟನೆ-ಭಾರತ್ ಬಂದ್ ಗೆ ಕರೆ…

455
firstsuddi

ಬೆಂಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಕಾರ್ಮಿಕ ಸಂಘಟನೆಗಳು ಜ.8ರಂದು ಭಾರತ್ ಬಂದ್ ಗೆ ಕರೆ ನೀಡಿವೆ. ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಸಂಘಟನೆಗಳು ಪದೇ ಪದೇ ದನಿ ಎತ್ತುತ್ತಿದ್ದರೂ ಸರ್ಕಾರ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಎಐಸಿಸಿಟಿಯು, ಎಐಟಿಯುಸಿ, ಹೆಚ್‍ಎಂಎಸ್, ಎಸ್‍ಡಬ್ಲ್ಯುಎ, ಸಿಐಟಿಯು, ಯುಟಿಯುಸಿ ಹಾಗೂ ಎಲ್‍ಪಿಎಫ್ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಗೆ ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು ಉಕ್ಕು ಮತ್ತು ರೈಲ್ವೇ ಸೇರಿದಂತೆ ವಿವಿಧ ವಲಯಗಳ ನೌಕರರು ಭಾರತ್ ಬಂದ್ ಗೆ ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.