ನವದೆಹಲಿ : ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇದೀಗ ಇಂದಿನಿಂದ ವಿವಿಧ ವಸ್ತುಗಳು ಮತ್ತು ಸೇವೆಗಳ ಮೇಲೆ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಹೇರಿ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.
ಕಳೆದ ತಿಂಗಳು ನಡೆದ ಜಿಎಸ್ ಟಿಯ 47ನೇ ಸಮಾವೇಶದಲ್ಲಿ ಹಲವು ರೀತಿಯ ದೈನಂದಿನ ಬಳಕೆಯ ಸರಕುಗಳ ಮೇಲೆ ಜಿಎಸ್ ಟಿ ವಿಧಿಸಿ ತೀರ್ಮಾನ ತೆಗೆದುಕೊಂಡಿದೆ.
ಯಾವುದು ದುಬಾರಿ?
ಆಟಾ, ಮೊಸರು ಮುಂತಾದ ಮೊದಲೇ ಪ್ಯಾಕ್ ಮಾಡಿದ, ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಶೇ.5 ರಷ್ಟು ಜಿಎಸ್ ಟಿ ವಿಧಿಸಲಾಗಿದೆ. ಹೋಟೆಲ್ ರೂಮ್ಸ್(1,000 ರೂ. ಒಳಗಿನ ಬಾಡಿಗೆ) – ಶೇ.12, ಹಾಸ್ಪಿಟಲ್ ರೂಮ್ಸ್(5,000 ರೂ. ಮೇಲ್ಪಟ್ಟ ಬಾಡಿಗೆ) – ಶೇ.5, ಸೋಲಾರ್ ವಾಟರ್ ಹೀಟರ್ – ಶೇ.5 ರಿಂದ ಶೇ.12ಕ್ಕೆ ಹೆಚ್ಚಳವಾಗಿದೆ. ಚರ್ಮದ ಉತ್ಪನ್ನಗಳು – ಶೇ.5 ರಿಂದ ಶೇ.12ಕ್ಕೆ ಜಿಎಸ್ ಟಿ ಹೆಚ್ಚಳವಾಗಿದೆ.
ಭೂಪಟ, ಅಟ್ಲಾಸ್ – ಶೇ.12, ಪ್ರಿಂಟಿಂಗ್, ಇಂಕ್, ಪೆನ್ಸಿಲ್, ಮೆಂಡರ್ , ಡ್ರಾಯಿಂಗ್ ಗೆ ಬಳಸುವ ಉಪಕರಣಗಳು, – ಬ್ಲೇಡ್, ಸ್ಪೂನ್, ಫೋರ್ಕ್, ಎಲ್ ಇಡಿ ಬಲ್ಬ್, ಮೋಟಾರ್ ಪಂಪ್, ಸೈಕಲ್ ಪಂಪ್, ರುಬ್ಬವ ಯಂತ್ರ, ಡೈರಿ ಮೆಷಿನ್ – ಶೇ.12 ರಿಂದ ಶೇ.18ಕ್ಕೆ ಜಿಎಸ್ ಟಿ ಹೆಚ್ಚಳವಾಗಿದೆ.
ಯಾವುದು ಅಗ್ಗ?
ಟ್ರಕ್, ಸರಕು ಸಾಗಣೆಯ ಬಾಡಿಗೆಗೆ ಇಂಧನದ ವೆಚ್ಚವನ್ನು ಸೇರಿಸಿದ ಮೊತ್ತದ ಮೇಲಿನ ತೆರಿಗೆ ಶೇ 18 ರಿಂದ ಶೇ 12 ಕ್ಕೆ ಕಡಿತ, ಬ್ಯಾಟರಿ ಪ್ಯಾಕ್ ಇರುವ ಅಥವಾ ಇಲ್ಲದಿರುವ ಎಲೆಕ್ಟ್ರಿಕ್ ವಾಹನಗಳಿಗೆ ಶೇ 5ರಷ್ಟು ರಿಯಾಯಿತಿ ದರದ ಜಿಎಸ್ ಟಿ, ವೈದ್ಯಕೀಯ ಚಿಕಿತ್ಸೆಯಲ್ಲಿ ತ್ಯಾಜ್ಯ ಸಂಗ್ರಹಿಸುವ ಉಪಕರಣಗಳು, ರೋಪ್ವೇ ಮೂಲಕ ಸರಕು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆ ಶೇ 12 ರಿಂದ ಶೇ 5 ಕ್ಕೆ ಇಳಿಕೆಯಾಗಿದೆ.










