ಜಾನಪದ ಸಾಹಿತ್ಯ ಉಳಿದರೆ ದೇಶದ ಸಂಸ್ಕøತಿ ಉಳಿಯುತ್ತದೆ : ಬಸವರಾಜ ನೆಲ್ಲಿಸರ.

149
firstsuddi

ಚಿಕ್ಕಮಗಳೂರು : ಜಾನಪದ ಸಾಹಿತ್ಯ ಉಳಿದರೆ ದೇಶದ ಸಂಸ್ಕøತಿ ಉಳಿಯುತ್ತದೆ ಎಂದು ಜಾನಪದ ತಜ್ಞ ಬಸವರಾಜ ನೆಲ್ಲಿಸರ ಹೇಳಿದರು.

ಎನ್.ಆರ್.ಪುರ ತಾಲ್ಲೂಕಿನ ಮುಡಬದಲ್ಲಿ ಇತ್ತೀಚೆಗೆ ನಡೆದ ಜಾನಪದ ಕೋಗಿಲೆ ಕೆ.ಆರ್.ಲಿಂಗಪ್ಪ ಅವರ ಬದುಕು ಬರಹ ಕುರಿತ ವಿಚಾರ ಸಂಕಿರಣ ಮತ್ತು ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯ ಉಳಿದರೆ ಮಾತ್ರ, ದೇಶದ ಸಂಸ್ಕøತಿ ಉಳಿಯುವುದರಿಂದ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಕೆರೆ, ಕಟ್ಟೆ, ಬಾವಿ, ಶಾಲೆ, ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವ ಹಾಗೇ ಜಾನಪದ ಸಾಹಿತ್ಯವನ್ನೂ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಜಾನಪದ ಸಾಹಿತ್ಯಕ್ಕೆ ಎಲ್ಲರನ್ನೂ ಆಕರ್ಷಿಸುವ ಶಕ್ತಿ ಇದೆ. ಗ್ರಾಮೀಣ ಜನರ ಬದುಕಿನಲ್ಲಿ ಅದು ಹಾಸು ಹೊಕ್ಕಾಗಿದೆ. ಜಾನಪದ ಸಾಹಿತ್ಯ ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದರು ಬೆಳೆಸಿಕೊಂಡು ಬಂದ ನಡೆ, ನುಡಿ, ಆಚಾರ, ವಿಚಾರ, ಕಲೆ ಮತ್ತು ಸಂಸ್ಕøತಿಯನ್ನು ಆಧುನಿಕತೆ ನುಂಗಿ ಹಾಕುತ್ತಿದೆ. ಭಾರತದ ಸಂಸ್ಕøತಿ ಶಾಶ್ವತವಾಗಿ ಉಳಿಯಬೇಕಾದರೆ ನಮ್ಮ ಮೂಲ ಜಾನಪದ ಸಂಸ್ಕøತಿ ಉಳಿಯಬೇಕು ಎಂದು ತಿಳಿಸಿದರು.

ಈ ವೇಳೆ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ಈಶ್ವರ್ ಆಚಾರ್, ಈ ಭಾಗದ ಅಂಟಿಕೆ ಪಿಂಟಿಕೆಯ ಬಗ್ಗೆ ಪುಸ್ತಕ ಬರೆಯುವ ಹಾಗೂ ಮುಡಬ ನಾಟಿ ಔಷಧಿ ಕುರಿತು ಪ್ರಚುರ ಪಡಿಸುವ ಉದ್ದೇಶ ತಮಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|ಕೆ.ಪಿ.ಅಂಶುಮಂತ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘು, ಎನ್.ಆರ್.ಪುರ ಪಟ್ಟಣ ಪಂಚಾಯತಿ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಕೀರ್ತಿ ನಾಗರಾಜ್, ಹಿರಿಯ ಕಲಾವಿದ ಬೈರಾಲಿಂಗಪ್ಪ, ಮಗ್ಗಲಮಕ್ಕಿ ಗಣೇಶ್, ಯೋಗೀಶ್, ಶೆಟ್ಟಿಕೊಪ್ಪ ಮಹೇಶ್ ಉಪಸ್ಥಿತರಿ ದ್ದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳಿಂದ ನಡೆದ ಕಲಾಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.