ಜೈಪುರ: ಒಂದೇ ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ…

47
firstsuddi

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಇಂದು ಮುಂಜಾನೆ ಸರಣಿ ಭೂಕಂಪ ಸಂಭವಿಸಿದೆ. ಒಂದೇ ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಜನ ಆತಂಕಗೊಂಡಿದ್ದಾರೆ.

ಭೂಕಂಪನದ ತೀವ್ರತೆಯನ್ನು 4.4 ರಿಕ್ಟರ್ ಮಾಪಕದಲ್ಲಿ ಅಳೆಯಲಾಗಿದೆ. ಭೂಕಂಪನಗಳನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ರಾಷ್ಟ್ರೀಯ ಭೂಕಂಪನ ಶಾಸ್ತ್ರದ ಪ್ರಕಾರ, ಮುಂಜಾನೆ 4:10ಕ್ಕೆ ಮೊದಲ ಬಾರಿ (3.01 ತೀವ್ರತೆ), 4:23ಕ್ಕೆ 2ನೇ ಬಾರಿ (3.4 ತೀವ್ರೆತೆ) ಹಾಗೂ 4:25ಕ್ಕೆ ಮೂರನೇ ಬಾರಿ (4.4 ತೀವ್ರತೆ) ಭೂಮಿ ಕಂಪಿಸಿದೆ. ಜೈಪುರದ ಜನರು ಈ ವೇಳೆ ಗಾಢ ನಿದ್ದೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಇಡೀ ನಗರ ನಡುಗಿದ್ದು, ಜನ ಭಯದಿಂದ ಮನೆಗಳಿಂದ ಹೊರಬಂದಿದ್ದಾರೆ. ಭೂಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂಬುದು ತಿಳಿದು ಬಂದಿದೆ.