ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ – 21 ಸಾವಿರಕ್ಕೇರಿದ ಮೃತರ ಸಂಖ್ಯೆ…

36
firstsuddi

ಇಸ್ತಾಂಬುಲ್ : ಪ್ರಬಲ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಸಾವುಗಳು ಹೆಚ್ಚುವ ಸಾಧ್ಯತೆಗಳಿವೆ.

ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಧ್ವಂಸಗೊಂಡ ಕಟ್ಟಡದಲ್ಲಿ ಬದುಕುಳಿದವರು ಎದುರಿಸುತ್ತಿರುವ ಕಷ್ಟದ ಕಠೋರ ವಾಸ್ತವತೆ ಮನಕಲಕುವಂತಿದೆ. ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಟರ್ಕಿಯಲ್ಲಿ 17,674ಕ್ಕೆ ಏರಿದೆ. 72,879 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ನಿನ್ನೆ ಹೇಳಿದ್ದಾರೆ. ಸಿರಿಯಾದಲ್ಲಿ 3,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದು 2011ರಲ್ಲಿ ಜಪಾನ್‍ನ ಫುಕುಶಿಮಾದಲ್ಲಿ ನಡೆದ ಭೂಕಂಪದ ದುರಂತದಲ್ಲಿ ಸಂಭವಿಸಿದ ಸಾವಿನ ಪ್ರಮಾಣಕ್ಕಿಂತ ಅಧಿಕ. ಜಪಾನ್ ನ ಫುಕುಶಿಮಾದಲ್ಲಿ ಅಂದು 18,400ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.