ಟಾಲಿವುಡ್‍ನ ಖ್ಯಾತ ಖಳನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನ…

144
firstsuddi

ಹೈದರಾಬಾದ್ : ಟಾಲಿವುಡ್‍ನ ಖ್ಯಾತ ಖಳನಟ ಹಾಗೂ ಹಾಸ್ಯ ಕಲಾವಿದ ಜಯಪ್ರಕಾಶ್ ರೆಡ್ಡಿ(74) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಯಪ್ರಕಾಶ್ ರೆಡ್ಡಿ ಅವರು ಇಂದು ಹೃದಯಾಘಾತದಿಂದ ಬಾತ್ ರೂಮಿನಲ್ಲಿ ಕುಸಿದು ಬಿದ್ದಿದ್ದು, ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡೂ ಹೋಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. 1988ರಲ್ಲಿ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ಜಯಪ್ರಕಾಶ್ ಅವರು ಖಳನಟನಾಗಿ ಹಾಗೂ ಹಾಸ್ಯ ನಟನಾಗಿ ಸುಮಾರು ನೂರಕ್ಕೂ ಹೆಚ್ಚು ಸಿನಿಮಾನಗಳಲ್ಲಿ ಅಭಿನಯಿಸಿದ್ದಾರೆ.