ಟ್ವಿಟ್ಟರ್ ಲೋಗೋ ಅಧಿಕೃತ ಬದಲಾವಣೆ- ನೀಲಿ ಹಕ್ಕಿ ಜಾಗದಲ್ಲಿ ಬಂತು ‘X’ ಹೊಸ ಲೋಗೊ!

40
firstsuddi

ವಾಷಿಂಗ್ಟನ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದ್ದು, ನೀಲಿ ಬಣ್ಣದ ಹಕ್ಕಿಯ ಜಾಗದಲ್ಲಿಗ ಎಕ್ಸ್ (X) ಲೋಗೋ ಕಾಣಿಸಿಕೊಳ್ಳುತ್ತಿದೆ.

ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಇಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ನ ಪ್ರಧಾನ ಕಚೇರಿಯಲ್ಲಿ ಎಕ್ಸ್ ಬ್ರ್ಯಾಂಡಿಂಗ್‌ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಎಲೋನ್ ಮಸ್ಕ್ ನಿನ್ನೆ ಟ್ವಿಟ್ಟರ್‌ನ ಲೋಗೋ ಬದಲಾವಣೆ ಬಗ್ಗೆ ಸುಳಿವು ನೀಡಿದ್ದರು. ನಾವು ಶೀಘ್ರವೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಹಾಗೂ ಎಲ್ಲಾ ಹಕ್ಕಿಗಳಿಗೂ ವಿದಾಯ ಹೇಳಬೇಕಿದೆ ಎಂದು ತಿಳಿಸಿದ್ದರು.