ಡಿವೈಡರ್ ಹಾರಿ ಬೈಕ್ ಗೆ ಡಿಕ್ಕಿ ಹೊಡೆದ ಕಾರು-ಮೂವರು ಸ್ಥಳದಲ್ಲೇ ಸಾವು…

122
firstsuddi

ಮೈಸೂರು : ಡಿವೈಡರ್ ಹಾರಿ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ರಸ್ತೆಯ ದಂಡಿಮಾರಮ್ಮ ದೇವಸ್ಥಾನದ ಬಳೀ ನಡೆದಿದೆ. ಮೃತರನ್ನು ರಮೇಶ್(41), ಪತ್ನಿ(34) ಹಾಗೂ ಮೋನಿಷಾ(5) ಎಂದು ಗುರುತಿಸಲಾಗಿದೆ. ಮೃತರು ತಮ್ಮ ಬೈಕ್‍ನಲ್ಲಿ 4 ಮಂದಿ ಸಿದ್ದಲಿಂಗಪುರದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಮೈಸೂರಿನಿಂದ ಶೃಈರಂಗಪಟ್ಟಣದ ಕಡೆಗೆ ತೆರಳುತ್ತಿದ್ದ ಕಾರು ರಸ್ತೆ ವಿಭಜಕವನ್ನು ದಾಟಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 3 ವರ್ಷದ ಸಿದ್ದಾರ್ಥ್ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.