ತನ್ನ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯಿಂದ ಎಂಬಿಬಿಎಸ್ ಪರೀಕ್ಷೆ ಬರೆಸಿದ ವ್ಯಕ್ತಿ ಪೊಲೀಸ್ ವಶಕ್ಕೆ!

117
Firstsuddi

ನವದೆಹಲಿ : ತನ್ನ ಹೆಸರಿನಲ್ಲಿ ಬೇರೊಬ್ಬ ವ್ಯಕ್ತಿಯಿಂದ ಎಂಬಿಬಿಎಸ್ ಪರೀಕ್ಷೆ ಬರೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಾಜಸ್ತಾನದ ಪಾಲಿ ಜಿಲ್ಲೆಯ ನಿವಾಸಿಯಾದ ಮನೋಹರ್ ಸಿಂಗ್(35) ಎಂದು ಗುರುತಿಸಲಾಗಿದೆ.

ಎಫ್‌ಎಂಜಿಇ ಸ್ಕ್ರೀನಿಂಗ್ ಪರೀಕ್ಷೆಯನ್ನು ಡಿಸೆಂಬರ್ 4, 2020 ರಂದು ನಡೆಸಲಾಗಿದ್ದು, ಮನೋಹರ್ ಸಿಂಗ್ ಅವರಿಗೆ ಮಥುರಾ ರಸ್ತೆಯಲ್ಲಿ ಪರೀಕ್ಷಾ ಕೇಂದ್ರವನ್ನು ನೀಡಲಾಯಿತು. ಅರ್ಜಿ ನಮೂನೆಯಲ್ಲಿರುವ ಫೋಟೋ ಮತ್ತು ಪರೀಕ್ಷೆಯ ದಿನದಂದು ತೆಗೆದ ಫೋಟೋಗಳ ನಡುವೆ ಹೊಂದಿಕೆಯಾಗದ ಕಾರಣ ಆರೋಪಿಯ ಫಲಿತಾಂಶವನ್ನು ಸ್ಥಗಿತಗೊಳಿಸಲಾಗಿತ್ತು. ಫೆಬ್ರವರಿ 3 ರಂದು ಪರೀಕ್ಷೆಯ ದಿನದಂದು ತೆಗೆದ ಫೋಟೋದೊಂದಿಗೆ ಫೇಸ್ ಐಡಿಯನ್ನು ಪರಿಶೀಲಿಸಿದಾಗ ಅದು ಹೊಂದಿಕೆಯಾಗಲಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಆರ್ ಪಿ ಮೀನಾ ಅವರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಮನೋಹರ್ ಸಿಂಗ್ ಅವರು, ತಾನು ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದು, ಕಳೆದ ಆರು ವರ್ಷಗಳಿಂದ ಎಫ್‌ಎಂಜಿಇ ತೆರವುಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.