ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ಅವರು ಹೃದಯಾಘಾತದಿಂದ ವಿಧಿವಶ…

291
firstsuddi

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ(45) ಹೃದಯಾಘಾತದಿಂದ ನಿಧನರಾಗಿದ್ದಾರೆ. ವಡಿವೇಲು ಬಾಲಾಜಿ ಅವರಿಗೆ ಕಳೆದ 15 ದಿನಗಳ ಹಿಂದೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಾಲಾಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಬಾಲಾಜಿ ಅವರು 1991ರಲ್ಲಿ ಎನ್ ರಸಾವಿನ್ ಮನಸಿಲೆ ಎಂಬ ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದು, ಬಾಲಾಜಿ ಅವರು ಹಿರಿಯ ಹಾಸ್ಯ ನಟ ವಡಿವೇಲು ಅವರ ಮಿಮಿಕ್ರಿ ಮಾಡಿಕೊಂಡೇ ವಡಿಲೇಲು ಬಾಲಾಜಿ ಎಂಬ ಪ್ರಸಿದ್ಧಿ ಪಡೆದಿದ್ದರು. ವಡಿವೇಲು ಬಾಲಾಜಿ ಅವರ ನಿಧನಕ್ಕೆ ತಮಿಳು ಚಿತ್ರರಂಗದ ನಟರು, ನಟಿಯರು ಸೇರಿದಂತೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ.