ತಮಿಳು ಮನೆಯ ಸೊಸೆಯಾಗಬೇಕು ಎಂಬ ಆಸೆ : ರಶ್ಮಿಕಾ ಮಂದಣ್ಣ.

171
firstsuddi

ಚೆನ್ನೈ : ಕಿರಕ್‌ಪಾರ್ಟಿ ಸಿನಿಮಾದ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮಿಳುನಾಡಿನ ಸೊಸೆಯಾಗಬೇಕು ಎಂಬ ಆಸೆಯನ್ನು ಹೇಳಿಕೊಂಡಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆ ಆಗುವ ಆಸೆಯನ್ನು ಹೊರ ಹಾಕಿದ್ದಾರೆ. ತಮಿಳು ನಾಡು ಎಂದರೆ ನನಗೆ ತುಂಬಾ ಇಷ್ಟ. ಅಲ್ಲಿನ ಜನರು, ಸಂಪ್ರದಾಯ ತಮ್ಮನ್ನು ತುಂಬಾ ಆಕರ್ಷಿಸಿದೆ. ಹೀಗಾಗಿ ತಮಿಳು ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ನಟಿಸಿದ ಮೊದಲ ತೆಲುಗು ಚಿತ್ರ ‘ಚಲೋ’ ಸೂಪರ್ ಹಿಟ್ ಆಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಪ್ರಸ್ತುತ ಅಲ್ಲು ಅರ್ಜುನ್‌- ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.