ತಮ್ಮನಿಂದಲೇ ಅಣ್ಣನ ಬರ್ಬರ ಹತ್ಯೆ…

145
firstsuddi

ಹಾವೇರಿ : ತಮ್ಮನೇ ತನ್ನ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ ಗೊರವರ(22) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ದಿಳ್ಳೆಪ್ಪ ಗೊರವರ(20) ಅಣ್ಣನನ್ನು ಹತ್ಯೆ ಮಾಡಿದ ತಮ್ಮ. ಮೃತ ನಾಗರಾಜು ಪ್ರತಿದಿನ ಕುಡಿದು ಬಂದು ತನ್ನ ತಂದೆ ತಾಯಿಯೊಂದಿಗೆ ಜಗಳವಾಡುತ್ತಿದ್ದರು. ಪ್ರತಿದಿನ ಅಣ್ಣ ತಂದೆ ತಾಯಿಗೆ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ತಮ್ಮ ಕೊಡಲಿಯಿಂದ ನಾಗರಾಜು ಅವರನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.