ತಾಜ್‍ಮಹಲ್ ಟಿಕೆಟ್ ದರ ಹೆಚ್ಚಳ : ಆಗ್ರಾ ಆಡಳಿತ ನಿರ್ಧಾರ…

149
Firstsuddi

ನವದೆಹಲಿ : ವಿಶ್ವ ಪ್ರಸಿದ್ಧ ತಾಜ್ ಮಹಲ್ ವೀಕ್ಷಿಸಲು ಬರುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಟಿಕೆಟ್ ದರವನ್ನು ಹೆಚ್ಚಿಸಲು ಆಗ್ರಾ ಆಡಳಿತ ನಿರ್ಧರಿಸಿದೆ.

ಪ್ರಸ್ತುತ ದೇಶೀಯ ಪ್ರವಾಸಿಗರು ಸ್ಮಾರಕ ವೀಕ್ಷಣೆಗೆ 250 ರೂ. ನೀಡುತ್ತಿದ್ದು, ಇನ್ನು ಮುಂದೆ 480 ರೂ. ಪಾವತಿಸಬೇಕಿದೆ. ಇನ್ನು ವಿದೇಶಿ ಪ್ರವಾಸಿಗರಿಗೆ ಪ್ರಸ್ತುತ ಟಿಕೆಟ್ ದರ 1300 ರೂ. ಇದ್ದು, ಈ ದರ 1600 ರೂ. ಗೆ ಹೆಚ್ಚಳವಾಗಲಿದೆ.