ಮೂಡಿಗೆರೆ: ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ 4 ಗ್ರಾಮದ 8 ಸರ್ಕಾರಿ ಶಾಲೆಗಳ ಗಣಿತ ಕಲಿಖಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದಾರದಹಳ್ಳಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಅವರು ಮಾತನಾಡಿ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು 20 ಅಂಕ ಗಳಿಸುವಂತೆ ಹೇಳುವ ಮೂಲಕ ಶುಭಾಶಯ ಕೋರಿದರು.
ಗಣಿಕ ಕಲಿಕಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಮುಖ್ಯ ಅಧಿಕಾರಿ ಷರೀಪ್ ಗಣಿತ ವಿಷಯ ಮಕ್ಕಳಿಗೆ ಕಬ್ಬಿಣದ ಕಡಲೆ. ಆದ ಕಾರಣ ಸರ್ಕಾರ ಕ್ಲಿಷ್ಠಕರವಾದ ವಿಷಯವನ್ನು ಸರಳೀಕರಣಗೊಳಿಸಲು ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಲು 4, 5, 6 ನೇ ತರಗತಿಗಳಿಗೆ ಗಣಿಕ ಕಲಿಕಾ ಆಂದೋಲನದ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸಾಧನ ಮಣೀಶ್, ವಿಕ್ರಮ್, ಸ್ಥಳೀಯರಾದ ಅಕೀಲೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಚೇತನ್ ಮಾಡಿದರು, ಶಿಕ್ಷಕಿ ರೂಪ ಸ್ವಾಗತಿಸಿದರು. ಜಯಲಕ್ಷ್ಮಿ ವಂದಿಸಿದರು.










