ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ, ಅಭಿವೃದ್ಧಿ ಪರ ರಾಜಕಾರಣವನ್ನು ಬೆಂಬಲಿಸಬೇಕು : ಲಕ್ಷ್ಮೀ ಹೆಬ್ಬಾಳ್ಕರ್.

127
First Suddi

ಬೆಳಗಾವಿ : ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಹೇಳಿದ್ದಾರೆ.

ಮೆಂಟಲ್ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು “ನಾನು ರಾಮನ ಭಕ್ತೆ. ಹೀಗಾಗಿ ನಾನು ವೈಯಕ್ತಿಕವಾಗಿ ಎರಡು ಲಕ್ಷ ರೂ.ಗಳ ದೇಣಿಗೆ ನೀಡಿ ನನ್ನ ಭಕ್ತಿಯನ್ನು ತೋರಿಸಿದ್ದೇನೆ. ಇದಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ಜನರು ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾರೆ. ಕಾರಣ, ರಾಮರಾಜ್ಯದ ಕನಸು ಕಂಡವರಲ್ಲಿ ನಾವು ಒಬ್ಬರು. ಆದ್ರೆ, ರಾಮನ ಪಕ್ಷ ಅಂತಾ ಹೇಳಿಕೊಳ್ಳುವ ಬಿಜೆಪಿಯಲ್ಲಿ ಓರ್ವ ಮಹಿಳೆಗೆ ಬಗ್ಗೆ ಈ ರೀತಿ ಮಾತನಾಡೊದನ್ನ ಜನ ಗಮನಿಸುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವೂ ಆಗ್ತಿದೆ. ಬಸ್ ನಿಲ್ದಾಣದಲ್ಲಿ ಹುಡುಕಬೇಕು, ಧಾರವಾಡ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂಬೆಲ್ಲಾ ಹೇಳಿಕೆ ನೀಡುತ್ತಿರುವುದು ರಮೇಶ್ ಜಾರಕಿಹೊಳಿಗೆ ಶೋಭೆ ತರುವುದಿಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮಿ ಗೆಲ್ಲಲು ತಾನೇ ಕಾರಣ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಶಾಸಕಿ, ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಹೈಕಮಾಂಡ್ ಬಳಿ ಹೇಳಿ ನಾನೇ ಮಂತ್ರಿ ಮಾಡಿಸಿದ್ದು ಎನ್ನುತ್ತೇನೆ. ನಾನು ಹೇಳಿರುವ ಈ ಮಾತಿಗೂ ರಮೇಶ ಜಾರಕಿಹೊಳಿಯವರು ಹೇಳಿದ ಮಾತಿಗೂ ಪ್ರಾಮುಖ್ಯತೆ ನೀಡಬಾರದು. ಏಕೆಂದರೆ, ನಾನು- ನೀನು ಎನ್ನುವ ಸಾಕಷ್ಟು ರಾಜರು ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಹೀಗಾಗಿ ನನ್ನ ಆರಿಸಿ ಕಳುಹಿಸಿದ ಮತದಾರರು ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದಾರೆ. ವಿರೋಧಿಗಳು ನನ್ನನ್ನು ವಿರೋಧಿಸುತ್ತಾರೋ ನಾನು ಅಷ್ಟು ಗಟ್ಟಿ ಆಗುತ್ತಲೇ ಹೋಗುತ್ತೇನೆ ಎಂದು ರಮೇಶ ಜಾರಕಿಹೊಳಿಗೆ ಸವಾಲು ಹಾಕಿದರು.