ಧಾರವಾಡ : ಕೊರೊನಾ ಮಹಾಮಾರಿಗೆ ತಂದೆ-ಮಗ ಇಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ತಂದೆ ರವೀಂದ್ರನಾಥ ವಸ್ತ್ರದ್ (74) ಸೋಂಕಿನಿಂದ ನಿಧನರಾದರೆ, ಇಂದು ಅವರ ಮಗ ವಿಶ್ವನಾಥ ವಸ್ತ್ರದ್ (47) ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ರವೀಂದ್ರನಾಥ ವಸ್ತ್ರದ್ ಅವರು ಕಿರಾಣಿ ವರ್ತಕ ಹಾಗೂ ಕಿರಾಣಿ ವರ್ತಕ ಸಂಘದ ಕಾರ್ಯದರ್ಶಿಯಾಗಿದ್ದರು.










