ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಆದೇಶ ಪಾಲಿಸದವರನ್ನ ಶೂಟ್ ಮಾಡ್ತೇನೆ : ಪ್ರಮೋದ್ ಮುತಾಲಿಕ್.

80
firstsuddi

ಹುಬ್ಬಳ್ಳಿ : ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿದವರ ಮೇಲೆ ನಾನೇ ಗುಂಡಿಟ್ಟು ಹೊಡಿತೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಲೌಡ್ ಸ್ಪೀಕರ್ ವಿಚಾರವಾಗಿ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ಆದರೂ ಸರ್ಕಾರ ಏನು ಮಾಡುತ್ತಿದೆ? ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದ ನಿಮಗೆ ಈ ಬಗ್ಗೆ ಅರಿವು ಇಲ್ವಾ? ಲೌಡ್ ಸ್ಪೀಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಗೆ ಧಮ್ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಸುಪ್ರೀಂಕೋರ್ಟ್ ಅದೇಶ ಪಾಲನೆ ಮಾಡದವರ ಬಗ್ಗೆ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ. ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಅನ್ನೊದನ್ನ ತೋರಿಸುತ್ತೇನೆ. ನನ್ನ ಕೈಯಲ್ಲಿ ಸರ್ಕಾರ ಕೊಡಿ, ಗುಂಡು ಹೊಡೀತೀನಿ. ನೀವ್ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದೀರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ನಿಮ್ಮ ನಾಟಕವನ್ನು ಬಟಾ ಬಯಲು ಮಾಡ್ತೇವೆ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ರು. ದೇವಸ್ಥಾನಗಳಿಗೆ ತೆರಳಿ- ಸುಪ್ರಭಾತ ಹಾಕದಂತೆ ಧಮ್ಕಿ ಹಾಕಿದ್ದಾರೆ. ಸರ್ಕಾರದ ಸೊಕ್ಕು ಅಡಗಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು.

ಬಿಜೆಪಿ ನಿಮ್ಮಪ್ಪನದು ಅಲ್ಲ, ನಾವು ರಕ್ತ ಸುರಿಸಿ ಬಿಜೆಪಿ ಕಟ್ಟಿದ್ದೇವೆ. ರಾಜಕೀಯ ಈಗ ಮಾತನಾಡುವುದಿಲ್ಲ ನಮ್ಮ ಶ್ರಮದಿಂದ ನೀವು ಅಧಿಕಾರ ಅನುಭವಿಸುತ್ತಿದ್ದೀರಿ. ಬೊಮ್ಮಯಿ ಅಧಿಕಾರಕ್ಕೆ ಬಂದಾಗ ಖುಷಿ ಪಟ್ಟಿದ್ದೆವು. ಆದ್ರೆ ಇದೀಗ ತೀವ್ರ ನಿರಾಸೆಯಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಕಾರ್ಯವೈಖರಿ ಅಳವಡಿಸಿಕೊಳ್ಳಬೇಕು ಎಂದು ಕಿಡಿಕಾರಿದರು.

ಇದೇ ತಿಂಗಳು 8 ತಾರೀಖು, ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಧರಣಿ ಕುಳಿತುಕೊಳ್ಳತ್ತೇವೆ. ಬಿಜೆಪಿ ಗೆದ್ದಿರೋದೆ ಹಿಂದೂಗಳಿಂದ, ಹಿಂದೂ ಕಾರ್ಯಕರ್ತರ ಶ್ರಮದಿಂದ. ಅಧಿಕಾರದ ಗದ್ದುಗೆ ಮೇಲೆ ಕೂತು ಮೆರೆಯುತ್ತಿದ್ದೀರಿ, ನಿಮಗೆ ಗೊತ್ತಿಲ್ವಾ? ನಿಮ್ಮನ್ನು ಮುಖ್ಯಮಂತ್ರಿ, ಗೃಹ ಮಂತ್ರಿ ಮಾಡಿದ್ದು ಕೆಲಸ ಮಾಡಲು ಎಂದು ವಾಗ್ದಾಳಿ ನಡೆಸಿದರು.

ಕಾಶ್ಮೀರಿ ಪಂಡಿತರ ಮೇಲೆ ದಾಳಿ ಮುಂದುವರಿದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಮೋದ್ ಮುತಾಲಿಕ್, 32 ವರ್ಷಗಳಾಯಿತು. ಅಲ್ಲಿ ಇನ್ನೆಷ್ಟು ಹಿಂದೂಗಳ ಬಲಿಯಾಗಬೇಕು. ಕಾಶ್ಮೀರಿ ಪಂಡಿತರ ಸಾವು – ನೋವುಗಳು ಸಂಭವಿಸ್ತಿರೋದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಯಾಕೆ ದಾಳಿಕೋರರ ಮೇಲೆ ಗುಂಡು ಹೊಡೀತಿಲ್ಲಾ. ಕಾಶ್ಮೀರದಲ್ಲಿರೋ ಹಿಂದೂಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕು. ಕಾಶ್ಮೀರಿ ಫೈಲ್ಸ್ ಮತ್ತೆ ರಿಪೀಟ್ ಆಗ್ತಿದ್ದು, ಅದಕ್ಕೇನು ಮಾಡುತ್ತಿದ್ದೀರಿ. ಇದೇ ರೀತಿ ಹಿಂದೂಗಳ ಮೇಲೆ ದಾಳಿಗಳು ಮುಂದುವರಿದರೆ ಚಲೋ ಕಾಶ್ಮೀರ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.