ನಟ ದರ್ಶನ್ ಅಭಿನಯದ ‘ನವಗ್ರಹ’ ಸಿನಿಮಾ ನವೆಂಬರ್ 8ಕ್ಕೆ ಮರು ಬಿಡುಗಡೆಗೆ.

48

ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ದರ್ಶನ್ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರನ್ನು ಬಿಗ್ ಸ್ಕ್ರೀನ್‍ನಲ್ಲಿ ಯಾವಾಗ ನೋಡುತೇವೂ, ಎಂದು ಅವರ ಅಪಾರ ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಆಸೆಯನ್ನು ಇಡೇರಿಸಲು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಶುಭ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಅಭಿಮಾನಿಗಳಿಗಾಗಿ ದರ್ಶನ್ ನಟನೆಯ ಹಳೇ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಕೆಲ ವಾರಗಳ ಹಿಂದಷ್ಟೇ ಕರಿಯ ಚಿತ್ರವನ್ನು ರೀ ರಿಲೀಸ್ ಮಾಡಲಾಗಿತ್ತು. ಇದೀಗ ಅವರ ಸೂಪರ್ ಹಿಟ್ ನವಗ್ರಹ ಸಿನಿಮಾವನ್ನು ಮರು ಬಿಡುಗಡೆಗೊಳಿಸಲು ಸಿದ್ಧತೆ ನಡೆದಿದೆ. ಈ ವಿಚಾರವನ್ನು ದಿನಕರ್ ತೂಗುದೀಪ ತಮ್ಮ ವಿವಿಧ ಸೋಷಿಯಲ್ ಮೀಡಿಯಾ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದ ಡಿ ಬಾಸ್ ಫ್ಯಾನ್ಸ್ ಸಂತಸಗೊಂಡಿದ್ದಾರೆ.
ದಿನಕರ್ ತೂಗುದೀಪಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡು ನನ್ನ ನಿರ್ದೇಶನದ 2ನೇ ಚಿತ್ರ – ‘ನವಗ್ರಹ’, ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕರ ಮಕ್ಕಳನ್ನು ಒಟ್ಟಿಗೆ ಬೆಳ್ಳಿ ತೆರೆಯ ಮೇಲೆ ತಂದ ಒಂದು ಪ್ರಾಮಾಣಿಕ ಪ್ರಯತ್ನ. 16 ವರ್ಷಗಳ ಹಿಂದೆ ಬಿಡುಗಡೆ ಆಗಿ ನಿಮ್ಮೆಲ್ಲರ ಪ್ರೀತಿ–ಪ್ರೋತ್ಸಾಹದಿಂದ ಇಂದಿಗೂ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರ ಒತ್ತಾಯದ ಫಲವಾಗಿ ಇದೇ ನವೆಂಬರ್ 8 ರಂದು ಮರು ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಿ ಆನಂದಿಸಿ” ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಸಿನಿಮಾದ ಮರು ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕೃತ ದಿನಾಂಕ ಹಂಚಿಕೊಂಡಿರಲಿಲ್ಲ. ಅಕ್ಟೋಬರ್ 11ರಂದು ಪೋಸ್ಟ್ ಶೇರ್ ಮಾಡಿದ್ದ ನಿರ್ದೇಶಕರು, ನಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಪ್ರೀತಿಯ ಕೋರಿಕೆಯ ಮೇರೆಗೆ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿಗಳಿಗೋಸ್ಕರ.. ನೀವು ನೋಡಿ ಮೆಚ್ಚಿ ಹಾರೈಸಿದ ‘ನವಗ್ರಹ’ ಮತ್ತೆ ಮರುಬಿಡುಗಡೆಗೆ ಸಿದ್ಧವಾಗಿದೆ. ನಿಮ್ಮ ಪ್ರೀತಿ-ಬೆಂಬಲ ಸದಾ ಕನ್ನಡ ಚಿತ್ರರಂಗದ ಮೇಲಿರಲಿ” ಎಂದು ಬರೆದುಕೊಂಡಿದ್ದರು. ನವಗ್ರಹ ಸಿನಿಮಾವನ್ನು ದಿನಕರ್ ಮತ್ತು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ‘ಅಂಬಾರಿ’ ಕಳ್ಳತನಕ್ಕೆ ಪ್ರಯತ್ನಿಸುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮೈಸೂರು ದಸರಾ, ಅಂಬಾರಿ, ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ಚಿತ್ರ ಮರು ಬಿಡುಗಡೆ ಆಗುತ್ತಿದ್ದು, ನವೆಂಬರ್ 8 ರಂದು ದರ್ಶನ್ ಅಭಿಮಾನಿಗಳು ಹಬ್ಬ ಆಚರಿಸಲಿದ್ದಾರೆ.