ನಟಿ ಜಾಕ್ವೆಲಿನ್‍ಗೆ ಬಿಗ್ ರಿಲೀಫ್ – ಷರತ್ತುಬದ್ಧ ಜಾಮೀನು ಮಂಜೂರು…

70
firstsuddi

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಬಿಗ್ ರಿಲೀಫ್ ಸಿಕ್ಕಿದೆ.

2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಟಿಗೆ ಜಾಮೀನು ಮಂಜೂರು ಮಾಡಿದೆ.

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ, ಪ್ರಮುಖ ಕಿಂಗ್ ಪಿನ್ ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಹೊಂದಿದ್ದರು. ಅಲ್ಲದೇ, ಕುದುರೆ, ಕಾರು, ವಾಚ್, ದುಬಾರಿ ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಜಾಕ್ವೆಲಿನ್ ಪಡೆದುಕೊಂಡಿದ್ದರು ಎನ್ನುವ ಆರೋಪವಿದೆ. ಆದರೆ ಈ ಎಲ್ಲ ಆರೋಪಗಳನ್ನೂ ಜಾಕ್ವೆಲಿನ್ ತಳ್ಳಿ ಹಾಕಿದ್ದಾರೆ.