ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್…

75
firstsuddi

ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಅವರನ್ನು ಅರೆಸ್ಟ್ ಮಾಡಲಾಗಿದೆ.

ಏಳು ತಿಂಗಳ ಹಿಂದೆ ಆದಿಲ್ ಅವರನ್ನು ರಾಖಿ ವಿವಾಹವಾಗಿರುವುದಾಗಿ ತಿಳಿಸಿದ್ದರು. ಆದರೆ ಆದಿಲ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ರಾಖಿ ತಮ್ಮ ಅಳಲು ತೋಡಿಕೊಂಡಿದ್ದರು. ರಾಖಿ ಸಾವಂತ್ ಮದುವೆ ವಿಚಾರವಾಗಿ ಬೀದಿ ರಂಪ ಮಾಡುತ್ತಿದ್ದಂತೆಯೇ ಆದಿಲ್ ಕೂಡ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದ. ಇನ್ನೇನು ಮದುವೆ ವಿಚಾರ ಸುಖಾಂತ್ಯ ಕಾಣಲಿದೆ ಎನ್ನುವ ಹೊತ್ತಿನಲ್ಲಿ, ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎನ್ನುವ ವಿಚಾರವನ್ನು ರಾಖಿ ಕಣ್ಣಿರಿಡುತ್ತಾ ಹೇಳಿದ್ದರು.

ರಾಖಿ ತಮ್ಮ ಮರ್ಯಾದೆಯನ್ನು ತಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ಹಾಗಾಗಿ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದರು. ಆದಿಲ್ ಉಲ್ಟಾ ಹೊಡೆಯುತ್ತಿದ್ದಂತೆಯೇ ರಾಖಿ ಆದಿಲ್ ಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ. ಆ ಹುಡುಗಿಗಾಗಿಯೇ ತಮ್ಮ ಮದುವೆಯನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಪತಿ ಆದಿಲ್ ವಿರುದ್ಧ ರಾಖಿ ದೂರು ನೀಡಿದ್ದು, ಮುಂಬೈನ ಓಶಿವರ ಪೊಲೀಸರು ಆದಿಲ್ ಖಾನ್ ಅವರನ್ನು ಬಂಧಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ನಿನ್ನೆ ರಾತ್ರಿ ಇಬ್ಬರೂ ಒಂದೆಡೆ ಭೇಟಿ ಆಗಿದ್ದಾರೆ. ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಈ ವೇಳೆ ಪತಿಗೆ ರಾಖಿ ಸಾವಂತ್ ತುತ್ತು ತಿನ್ನಿಸಿದ್ದಾರೆ. ಇಷ್ಟೆಲ್ಲ ನಡೆದ ನಂತರ ಆದಿಲ್ ಖಾನ್ ಬಂಧನವಾಗಿದೆ.