ನಟಿ ಸಂಜನಾ ಗಲ್ರಾನಿಗೆ ಕೊರೊನಾ ಸೋಂಕು ದೃಡ…

132
firstsuddi

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೊನಾ ಸೋಂಕು ದೃಡಪಟ್ಟಿತ್ತು, ಈ ಬಗ್ಗೆ ಸ್ವತಃ ನಟಿ ಕೊರೊನಾ ಟೆಸ್ಟ್ ಮಾಡಿಸಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ನಟಿ ಮಿಲನಾ ನಾಗರಾಜ್, ನಟ ನಿಖಿಲ್ ಕುಮಾರ್, ನಿರ್ದೇಶಕ ಗುರುಪ್ರಸಾದ್, ನಟ ಕೃಷ್ಣ ಸೇರಿದಂತೆ ಸ್ಯಾಂಡಲ್ ವುಡ್ ನ  ತಾರೆಯರಿಗೆ ಕೊರೊನಾ ತಗಲಿದ್ದು ಇದೀಗ ಸಂಜನಾ ಗರ್ಲಾನಿಗೂ ಕೊರೊನಾ ಸೋಂಕು ದೃಡಪಟ್ಟಿದೆ.

ಕೆಲ ತಿಂಗಳ ಹಿಂದೆ ಡ್ರಗ್ಸ್ ಪ್ರಕರಣ ಸಂಬಂಧ ನಟಿ ಸಂಜನಾ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.