ನಾನು ಕಿರಿಕ್ ಪಾರ್ಟಿ ರಿಮೇಕ್ ನಲ್ಲಿ ನಟಿಸಲ್ಲ : ರಶ್ಮಿಕಾ ಮಂದಣ್ಣ.

132
firstsuddi

ಬೆಂಗಳೂರು : ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರು, ಸದ್ಯ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಏನಾದರೂ ಹಿಂದಿಯಲ್ಲಿ ರಿಮೇಕ್ ಆದರೆ ನೀವು ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ರಶ್ಮಿಕಾ ನಾನು ರಿಮೇಕ್ ಸಿನಿಮಾದಲ್ಲಿ ನಟಿಸೋಲ್ಲ. ಅದರಲ್ಲೂ ನಾನು ಕಿರಿಕ್ ಪಾರ್ಟಿ ರಿಮೇಕ್ ನಲ್ಲಿ ನಟಿಸಲ್ಲ. ಒಮ್ಮೆ ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಭಾವನೆಗಳನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನ ಬಳಿ ಏನೂ ಇರುವುದಿಲ್ಲ. ಹೊಸ ಹೊಸ ಕಥೆಗಳ ಮೂಲಕ ಹೊಸ ಅನುಭವವನ್ನು ಪಡೆಯುವ ಅವಕಾಶ ಎದುರು ಇರುವಾಗ ನಾನೇಕೆ ಮತ್ತೆ ಹಳೆಯ ಪಾತ್ರವನ್ನೇ ನಟಿಸಲಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಮಜ್ನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.