ನಾನು ನೂರಕ್ಕೆ ನೂರು ಏಕಪತ್ನಿ ವ್ರತಸ್ಥ : ಶಿವಲಿಂಗೇಗೌಡ.

163
Firstsuddi

ಬೆಂಗಳೂರು : ನಾನು ನೂರಕ್ಕೆ ನೂರು ಏಕಪತ್ನಿ ವ್ರತಸ್ಥ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಹೇಳಿದ್ದಾರೆ.

ಸಚಿವ ಸುಧಾಕರ್ ಅವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅವರು ತಪ್ಪು ಹೇಳಿದ್ದಾರೆ. ನಾನು ನೂರಕ್ಕೆ ನೂರು ಏಕ ಪತ್ನಿ ವ್ರತಸ್ಥ, ನನಗೆ ಒಬ್ಬಳೇ ಹೆಂಡತಿಯಿದ್ದು, ಬೇರೆ ಯಾವುದೆ ಸಂಬಂಧ ಇಲ್ಲ. ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಸತ್ಯ ಇದ್ದರೆ ಅದು ದೇವಸ್ಥಾನದಲ್ಲಿ ಮಾತ್ರ. ನಾನೂ ಯಾವ ದೇವರ ಮೇಲಾದರೂ ಆಣೆ ಮಾಡುತ್ತೇನೆ. ಸುಧಾಕರ್ ಅವರು ಹಾಗೆ ಹೇಳಿದ್ದು ತಪ್ಪು.ಇವರೇಕೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. ನಾನು ಏಕ ಪತ್ನಿ ವ್ರತಸ್ಥನೇ.ಎಂದು ಶಿವಲಿಂಗೇಗೌಡ ಅವರು ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.