ಕೊಟ್ಟಿಗೆಹಾರ : ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ವಿವಿಧ ಸಾಧಕರನ್ನು ಇತ್ತೀಚೇಗೆ ಸನ್ಮಾನಿಸಲಾಯಿತು.
ವೈದ್ಯರಾದ ಡಾ.ಮಧುಸೂದನ್, ಡಾ.ಮನೋಜ್, ಸಹಕಾರಿ ಬಸ್ ಚಾಲಕ ಎಸ್.ಪಾಂಡುರಂಗ ತೀರ್ಥಹಳ್ಳಿ, ಏಕಲವ್ಯ ಪ್ರಶಸ್ತಿ ವಿಜೇತ ಎಚ್.ಎಸ್.ಸಾಕ್ಷಾತ್ ಗೌಡ, ಬಾಳೂರು ಠಾಣಾ ಪಿಎಸ್ಐ ಸಿ.ಪವನ್ ಕುಮಾರ್ ಅವರ ಉತ್ತಮ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ರಾಮೇಶ್ವರ ದೇವಸ್ಥಾನದ ಆಡಳಿತದಾರರಾದ ಸುನಿಲ್ ಜೆ.ಗೌಡ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ವೇತಾ ಸುನಿಲ್ ಗೌಡ, ವ್ಯವಸ್ಥಾಪಕ ಎನ್.ಆರ್. ನಾಗರಾಜ್ ಭಟ್ ಇದ್ದರು.










