ನಿಮ್ಮನ್ನು ಹತ್ಯೆ ಮಾಡ್ತೇವೆ – ಅಮಿತ್ ಶಾ, ಯೋಗಿ ಆದಿತ್ಯನಾಥ್ ಗೆ ಇಮೇಲ್ ಮೂಲಕ ಬೆದರಿಕೆ…

134
firstsuddi

ನವದೆಹಲಿ : ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಈ ಇಬ್ಬರು ರಾಜಕಾರಣಿಗಳ ಹತ್ಯೆ ಮಾಡುವುದಾಗಿ ಮುಂಬೈನ ಕೇಂದ್ರ ಮೀಸಲು ಪೊಲಿಸ್ ಪಡೆ(ಸಿಆರ್ ಪಿಎಫ್) ಗೆ ಕಳುಹಿಸಿದ್ದಾಗಿ ಮೂಲಗಳು ತಿಳಿಸಿದ್ದು, ಇಮೇಲ್ ನಲ್ಲಿ ಪೂಜಾ ಸ್ಥಳಗಳು ಹಾಗೂ ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿಯೂ ತಿಳಿಸಲಾಗಿದೆ.

ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಅವರನ್ನು ಆತ್ಮಹತ್ಯಾ ದಾಳಿಯ ಮೂಲಕ ಹತ್ಯೆ ಮಾಡುತ್ತೇವೆ. ಅಲ್ಲದೇ ನಮ್ಮ ಬಳಿ 11 ಆತ್ಮಹತ್ಯಾ ಬಾಂಬರ್ ಗಳಿದ್ದಾರೆ. ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ. ಸದ್ಯ ಈ ಮೇಲ್ ನನ್ನು ಭದ್ರತಾ ಪಡೆಗಳ ಮುಖ್ಯಸ್ಥರಿಗೆ ಹಾಗೂ ತನಿಖಾ ದಳಗಳಿಗೆ ಕಳುಹಿಸಲಾಗಿದೆ ಎಂದು ಸಿಆರ್ ಪಿಎಫ್ ತಿಳಿಸಿದೆ.