ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ : ಹೆಚ್.ಡಿ. ಕುಮಾರಸ್ವಾಮಿ.

237
firstsuddi

ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ ‘ಜಾಗರಣೆ’ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ. ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಿರುವ ಹಣಕಾಸು ನೆರವಿನ ಬಗ್ಗೆ ತುಟಿಬಿಚ್ಚದೆ, ನೆರೆ ಸಂತ್ರಸ್ತರ ಗೋಳು ಕೇಳದ ಕೇಂದ್ರ-ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಅಭಿಯಾನ ನಡೆಸುವ ಮೂಲಕ ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು. ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ. ಅಂಂ ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.