ನೇತ್ರಾವತಿ ಸೇತುವೆಯಲ್ಲಿ ರಸ್ತೆ ಅಫಘಾತ – ಯುವಕ ಸಾವು…

203
firstsuddi

ಮಂಗಳೂರು: ನೇತ್ರಾವತಿ ಸೇತುವೆಯ ಮೇಲೆ ನಡೆದ ರಸ್ತೆ ಅಫಘಾತದಲ್ಲಿ 28 ವರ್ಷದ ಯುವಕನೊಬ್ಬ ಅಫಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಉಳ್ಳಾಲ ಬಂಡಿಕೊಟ್ಯಾ ನಿವಾಸಿ ಉಬೇದ್ (28) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಶಾಖಿರ್ ಮತ್ತು ಉಬೇದುಲ್ಲಾ ಅವರು ಮಂಗಳೂರಿನಿಂದ ಉಳ್ಳಾಲಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ನೇತ್ರಾವತಿ ಸೇತುವೆ ಯ ಮೇಲೆ ತಲುಪಿದಾಗ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಉಬೇದುಲ್ಲಾ ಸೇತುವೆಯ ಮೇಲೆ ಸಾಗುತ್ತಿದ್ದ ಲಾರಿಯೊಂದರ ಚಕ್ರದಡಿ ಬಿದ್ದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸಹ ಸವಾರ ಶಾಖಿರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಕಾರು ಚಾಲಕ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ