ಪಂಜಾಬ್ ವಿಧಾನಸಭೆ ಚುನಾವಣೆ ಫೆ.20ಕ್ಕೆ ಮುಂದೂಡಿಕೆ…

63
firstsuddi

ನವದೆಹಲಿ : ಫೆಬ್ರವರಿ 14ರಂದು ನಡೆಯಬೇಕಿದ್ದ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 20ಕ್ಕೆ ಮುಂದೂಡಿದೆ. 

ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಪಂಜಾಬ್ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ. ಪಂಜಾಬ್ ನಲ್ಲಿ ಫೆ.16 ರಂದು ಗುರು ರವಿದಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. 32% ಮತದಾರರಿರುವ ಪರಿಶಿಷ್ಟ ಜಾತಿಯ ಸಮುದಾಯ ಈ ಜನ್ಮದಿನವನ್ನು ವಿಶೇಷ ಆಚರಿಸುತ್ತದೆ. ಇದಕ್ಕಾಗಿ ಅವರು ಫೆಬ್ರವರಿ 10ರಿಂದ 16 ವರೆಗೂ ಉತ್ತರಪ್ರದೇಶದ ವಾರಣಾಸಿಗೆ ತೆರಳುತ್ತಾರೆ. ಫೆಬ್ರವರಿ 14 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು, ಈ ಅವಧಿಯಲ್ಲಿ ಪಂಜಾಬ್‍ನಲ್ಲಿ ಪರಿಶಿಷ್ಠ ಜಾತಿಯ ಜನರು ಅನುಪಸ್ಥಿತಿಯಲ್ಲಿರಲಿದ್ದಾರೆ. ದೊಡ್ಡ ಪ್ರಮಾಣದ ಮತದಾರರ ಅನುಪಸ್ಥಿತಿಯಲ್ಲಿ ಮತದಾನ ನಡೆಸುವುದು ಸೂಕ್ತವಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ವಿಸ್ತೃತ ಪತ್ರ ಬರೆದಿದ್ದರು.

ಚುನಾವಣೆ ಮುಂದೂಡಿಕೆ ಮನವಿ ಹಿನ್ನೆಲೆ ಇಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿದ್ದು, ಈ ಸಭೆಯಲ್ಲಿ ಫೆ.20ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ.