ಪಾಕಿಸ್ತಾನ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ…

50
firstsuddi

ಇಸ್ಲಾಮಾಬಾದ್ : ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಪಡೆದ ಸರ್ಕಾರಿ ಉಡುಗೊರೆಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಚುನಾವಣಾ ಆಯೋಗ ಇಂದು ಅನರ್ಹಗೊಳಿಸಿದೆ.

ಇಮ್ರಾನ್ ಖಾನ್ ಇನ್ನು ಮುಂದೆ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಲ್ಲ, ಅವರ ಸ್ಥಾನ ಖಾಲಿ ಎಂದು ಇಸಿಪಿ ಘೋಷಿಸಿದೆ. ಇದರೊಂದಿಗೆ ಮಾಜಿ ಪ್ರಧಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗ ನಿರ್ಧರಿಸಿದೆ.

2018 ರಲ್ಲಿ ಅಧಿಕಾರಕ್ಕೆ ಬಂದ ಖಾನ್, ಅಧಿಕೃತ ಭೇಟಿಗಳ ಸಮಯದಲ್ಲಿ ಶ್ರೀಮಂತ ಅರಬ್ ಆಡಳಿತಗಾರರಿಂದ ದುಬಾರಿ ಉಡುಗೊರೆಗಳನ್ನು ಪಡೆದರು, ಅವುಗಳನ್ನು ತೋಷಖಾನಾದಲ್ಲಿ ಠೇವಣಿ ಇಡಲಾಗಿದೆ. ನಂತರ ಅವರು ಸಂಬಂಧಿತ ಕಾನೂನುಗಳ ಪ್ರಕಾರ ರಿಯಾಯಿತಿ ದರದಲ್ಲಿ ಖರೀದಿಸಿದರು ಮತ್ತು ಭಾರೀ ಲಾಭದಲ್ಲಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಬಂದಿದೆ.

ಇಸಿಪಿ ಪ್ರಕಾರ ಇಮ್ರಾನ್ ಖಾನ್ ಅವರು 2 ಕೋಟಿ ರೂ. ಪಾವತಿಸಿ ರಾಜ್ಯದ ಖಜಾನೆಯಿಂದ ಉಡುಗೊರೆಗಳನ್ನು ಪಡೆದು, ಅವುಗಳನ್ನು ಸುಮಾರು 5.8 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಮಾರಾಟ ಮಾಡಿರುವ ಉಡುಗೊರೆಗಳಲ್ಲಿ ಐಷಾರಾಮಿ ಕೈಗಡಿಯಾರಗಳು, ಆಭರಣಗಳು, ಡಿಸೈನರ್ ಹ್ಯಾಂಡ್ ಬ್ಯಾಗ್ ಮತ್ತು ಸುಗಂಧ ದ್ರವ್ಯಗಳು ಸೇರಿವೆ.