ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ನಾಪತ್ತೆ…

125
firstsuddi

ನವದೆಹಲಿ : ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಇಂದು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಳೆದ ಎರಡು ಗಂಟೆಗಳಿಂದ ಪಾಕಿಸ್ತಾನದ ಇಬ್ಬರು ಭಾರತೀಯ ಹೈಕಮಿಷನರ್ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ. ಸಂಬಂಧಪಟ್ಟ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಈ ಕುರಿತು ಭಾರತ ಸರ್ಕಾರ ಚರ್ಚೆ ನಡೆಸಿದೆ ಎಂದು ತಿಳೀದು ಬಂದಿದೆ. ನಾಪತ್ತೆಯಾದವರು ಒಬ್ಬರು ಸಿಐಎಸ್‍ಎಫ್ ಅಧಿಕಾರಿ ಹಾಗೂ ಒಬ್ಬರು ಚಾಲಕರಾಗಿದ್ದು, ಇವರು ಇಸ್ಲಾಮಾಬಾದ್‍ನಲ್ಲಿ ಕರ್ತವ್ಯದಲ್ಲಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಕ್ ಸರ್ಕಾರದ ಗಮನಕ್ಕೆ ತರಲಾಗಿದೆ.