ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ…

70
firstsuddi

ಬೆಂಗಳೂರು : ದಿವಂಗತ ನಟ ಪುನೀತ್ ರಾಜ್‍ಕುಮಾರ್ ಸಮಾಧಿ ದರ್ಶನಕ್ಕೆ ಕೊನೆಗೂ ಅಭಿಮಾನಿಗಳಿಗೆ ಅವಕಾಶ ಸಿಕ್ಕಿದೆ. ಇಂದಿನಿಂದ ಬೆಳಗ್ಗೆ 9 ರಿಂದ ಸಂಜೆ 6ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುವವರೆಗೂ ಬಿಗಿ ಭದ್ರತೆ ಮುಂದುವರಿಯಲಿದೆ.

ನಿನ್ನೆ ಕುಟುಂಬಸ್ಥರಿಂದ ಹಾಲು-ತುಪ್ಪ ಕಾರ್ಯದ ನಂತರ ಸಂಜೆ 6 ಗಂಟೆಯ ಬಳಿಕ ಅಭಿಮಾನಿಗಳಿಗೆ ಅಪ್ಪು ಸಮಾಧಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಇಂದು ಸಹ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಸುತ್ತಮುತ್ತ ಸ್ಥಳೀಯ ಪೊಲೀಸ್ ಹಾಗೂ ಆರ್​​ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.