ಪ್ರತಿದಿನ ಒಂದು ಕಪ್ ಮೊಸರು ಸೇವಿಸುವುದರಿಂದ ಪಡೆಯಬಹುದಾದ ಲಾಭಗಳೇನು ಗೊತ್ತಾ?

1003

ಮೊಸರು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಮೊಸರನ್ನು ಇಷ್ಟ ಪಡುತ್ತಾರೆ. ಹಾಲಿನ ಮೂಲದಿಂದ ತಯಾರಾಗುವ ಮೊಸರನ್ನು ಬಡವರು, ಶ್ರೀಮಂತರು ಎನ್ನದೇ ಎಲ್ಲರೂ ಸಾಮಾನ್ಯ ಆಹಾರವಾಗಿ ಬಳಸುತ್ತಾರೆ.
ಒಂದು ಕಪ್ ಮೊಸರನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲು ಹಾಗೂ ತ್ವಚೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮೊಸರು ಸಹಕಾರಿಯಾಗಿದೆ.
ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಗಳು ಇವೆ. ಪ್ರತಿನಿತ್ಯ ಒಂದು ಕಪ್ ಮೊಸರನ್ನು ಸೇವಿಸುವುದರಿಂದ ಹಲವಾರು ಉಪಯೋಗಗಳನ್ನು ಪಡೆಯಬಹುದಾಗಿದೆ.

ಪ್ರತಿದಿನ ಮೊಸರು ಸೇವನೆಯಿಂದ ಪಡೆಯುವ ಲಾಭಗಳು:
• ಮೊಸರು ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.
• ರೋಗ ನಿರೋಧಕ ಶಕ್ತಿಯನ್ನು ಮೊಸರು ಸೇವಿಸುವ ಮೂಲಕ ಹೆಚ್ಚಿಸಬಹುದು.
• ಪ್ರತಿನಿತ್ಯ ಒಂದು ಕಪ್ ಮೊಸರು ಸೇವಿಸುವುದರಿಂದ ಚರ್ಮದ ಶಾಂತಿ ಹೆಚ್ಚುತ್ತದೆ.
• ಮೂಳೆಗಳ ಆರೋಗ್ಯಕ್ಕೂ ಕೂಡಾ ಮೊಸರು ಸೇವನೆ ಉತ್ತಮವಾಗಿದೆ.
• ಮೊಸರು ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು.
• ಪ್ರತಿನಿತ್ಯ ಮೊಸರು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಬಹುದು.
• ಮೊಸರಿಗೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
• ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಮೊಸರು ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು.
• ಮೊಸರು ಸಂದಿವಾತದ ವಿರುದ್ಧ ಹೋರಾಡುತ್ತದೆ.
• ಪ್ರತಿನಿತ್ಯ ಮೊಸರು ಸೇವಿಸುವುದರಿಂದ ಹಲ್ಲುಗಳು ಗಟ್ಟಿಗೊಳ್ಳುತ್ತವೆ.
• ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರು ಮೊಸರನ್ನು ಸೇವಿಸುವುದು ಉತ್ತಮ.
• ಬೇಧಿ, ಮಲಬದ್ಧತೆ ರೋಗಗಳಿಗೆ ಮೊಸರು ಸೇವಿಸುವುದು ಉತ್ತಮವಾಗಿದೆ.