ಪ್ರಿಯಕರನ ಕಣ್ಣೆದುರೇ ಯುವತಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು!

85
firstsuddi

ಹೈದರಾಬಾದ್ : ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಕಣ್ಣೆದುರೇ ಯುವತಿಯನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಯುವತಿ ತನ್ನ ಪ್ರೇಮಿ ಜೊತೆ ಮಚಲಿಪಟ್ಟಣಂನ ಬಂದರ್ ಮಂಡಲ್ನ ಪಲ್ಲಿಪಾಲೆಮ್ ಬೀಚ್ ಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಇಬ್ಬರು ದುಷ್ಕರ್ಮಿಗಳು ಜೋಡಿ ಮೇಲೆ ದಾಳಿ ಮಾಡಿದೆ. ಬಳಿಕ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಕಣ್ಣೆದುರೇ ಗೆಳತಿಯನ್ನು ಅತ್ಯಾಚಾರ ಮಾಡಿದ್ದಾರೆ.

ಇದಾದ ಬಳಿಕ ಇಬ್ಬರು ತಮ್ಮ – ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಈ ವೇಳೆ, ಯುವತಿ ಸ್ಥಿತಿ ಗಮನಿಸಿದ ಆಕೆಯ ಸಹೋದರ ಆಕೆಯನ್ನು ಕೇಳಿದಾಗ ನಡೆದ ವಿಷಯವೆಲ್ಲವೂ ಹೇಳಿದ್ದಾಳೆ. ಕೂಡಲೇ ಸಂತ್ರಸ್ತೆ ಸಹೋದರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ಬಂದರ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.