ಪ್ರೀತಿ ನಿರಾಕರಣೆ… ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಭಗ್ನ ಪ್ರೇಮಿ ಆತ್ಮಹತ್ಯೆ!

73
firstsuddi

ಕೋಯಿಕ್ಕೋಡ್ : ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನ ಪ್ರೇಮಿಯೊಬ್ಬ ಬಳಿಕ ತಾನೂ ಬೆಂಕಿ ಹಚ್ಚಕೊಂಡು ಪ್ರಾಣ ಬಿಟ್ಟಿರುವ ಘಟನೆ ತಿಕ್ಕೋಡಿಯಲ್ಲಿ ನಡೆದಿದೆ.

ಕೃಷ್ಣಪ್ರಿಯಾ ಕೊಲೆಯಾದ ದುರ್ದೈವಿ. ತಿಕ್ಕೋಡಿಯ ಪಳ್ಳಿತಾಳಂ ನಿವಾಸಿ ನಂದನ್ ಕುಮಾರ್ ಕೃಷ್ಣಪ್ರಿಯಾಗೆ ಬೆಂಕಿಯಿಟ್ಟು ತಾನೂ ಪ್ರಾಣ ಬಿಟ್ಟಿದ್ದಾನೆ. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಮುಗಿಸಿರುವ ಕೃಷ್ಣಾಪ್ರಿಯಾಗೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ತಿಕ್ಕೋಡಿ ಪಂಚಾಯತ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ನಂದನ್ ಕುಮಾರ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಬೆಳಗ್ಗೆ ಪಂಚಾಯಾತ್ ಕಚೇರಿಯ ಮುಂದೆಯೇ ಕೃಷ್ಣಪ್ರಿಯಾಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಪಂಚಾಯತ್ ಕಚೇರಿಗೆ ತೆರಳಿದ್ದಾರೆ. ಬಳಿಕ ಇಬ್ಬರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಕೃಷ್ಣಪ್ರಿಯಾ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮೃತಪಟ್ಟರೆ, ಇಂದು ಬೆಳಗ್ಗೆ ನಂದನ್ ಕುಮಾರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ನಂದಕುಮಾರ್ ಕೃಷ್ಣಪ್ರಿಯಾ ಎಂಬ ಯುವತಿಯನ್ನು ಪ್ರೀತಿಸುವಂತೆ ಕಾಡುತ್ತಿದ್ದನು. ಆದರೆ ಕೃಷ್ಣಪ್ರಿಯಾ ನಂದಕುಮಾರ್ ಪ್ರೀತಿಯನ್ನು ನಿರಾಕರಿಸುತ್ತಲೇ ಬಂದಿದ್ದಾಳೆ ಎಂದು ಯುವತಿ ಸಂಬಂಧಿಕರು ಹೇಳಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.