ಪ್ರೇಮ ವೈಫಲ್ಯ: ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ…

38
firstsuddi

ಗದಗ: ಬೇರೊಬ್ಬನ ಜೊತೆ ಮದುವೆ ಮಾಡಿದಕ್ಕೆ ಮನನೊಂದು ಯುವತಿ ತನ್ನ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ನಡೆದಿದೆ.

ಅಪ್ಪಣ್ಣ ಕನಕಪ್ಪ ಗೊರಕಿ (28) ಹಾಗೂ ಲಲಿತಾ ರಾಜೇಂದ್ರ ಹಲಗೇರಿ (24) ಮೃತ ಪ್ರೇಮಿಗಳು. ಅಪ್ಪಣ್ಣ ಕನಕಪ್ಪ ಗೊರಕಿ ಮತ್ತು ಲಲಿತಾ ರಾಜೇಂದ್ರ ಹಲಗೇರಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮನೆಯವರು ಈ ಜೋಡಿಯ ಪ್ರೀತಿಯನ್ನು ನಿರಾಕರಿಸಿ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ ಎನ್ನಲಾಗಿದೆ.

ಏಪ್ರಿಲ್ 4 ರಂದು ಲಲಿತಾಳನ್ನು ಬೇರೊಬ್ಬನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಹೀಗಾಗಿ, ಪ್ರೀತಿಸಿದವರ ಜೊತೆ ವಿವಾಹವಾಗದ ಹಿನ್ನೆಲೆ ಮನನೊಂದು ಜೋಡಿ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.