ಪತ್ನಿಗೆ ಈರುಳ್ಳಿ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್…

286
firstsuddi

ಮುಂಬೈ : ದೇಶಾಧ್ಯಂತ ಈರುಳ್ಳಿ ಬೆಲೆ ಹೆಚ್ಚಾಗಿದ್ದು, ಇದರ ವಿರುದ್ಧ ಪ್ರತಿಭಟನೆಯೂ ಕೂಡಾ ನಡೆಯುತ್ತಿದ್ದು, ಈಗಾ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಈರುಳ್ಳಿ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಟ್ವಿಂಕಲ್ ಅವರು ತಮ್ಮ ಇನ್‍ಸ್ಟಾಗಾಂನಲ್ಲಿ ಅಕ್ಷಯ್ ಕುಮಾರ್ ಅವರು ಉಡುಗೊರೆಯಾಗಿ ನೀಡಿದ ಈರುಳ್ಳಿ ಕಿವಿಯೋಲೆಯ ಫೋಟೋವನ್ನು ಪೋಸ್ಟ್ ಮಾಡಿ ಅದಕ್ಕೆ ನನ್ನ ಸಂಗಾತಿ ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮದಿಂದ ಬಂದು ನನಗೆ ಈರುಳ್ಳಿ ಕಿವಿಯೋಲೆಯನ್ನು ತೋರಿಸಿ ಇದನ್ನು ನಾನು ಕರೀನಾ ಅವರಿಗೆ ತೋರಿಸಿದೆ ಆದರೆ ಅವರು ಇದರಿಂದ ಆಕರ್ಷಿತರಾಗಲಿಲ್ಲ. ಅದಕ್ಕೆ ನೀನು ಆಕರ್ಷಿತವಾಗಬಹುದು ಎಂದು ಅನಿಸಿತು. ಹಾಗಾಗಿ ನಿನಗೆ ನೀಡುತ್ತಿದ್ದೇನೆ. ಕೆಲವು ಬಾರಿ ಸಣ್ಣ ಹಾಗೂ ಸಾಧಾರಣಾ ವಸ್ತು ನಮ್ಮ ಮನಸ್ಸನ್ನು ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.