ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಕೋವಿಡ್ ಸೋಂಕು…

105
firstsuddi

ಮುಂಬೈ : ಬಾಲಿವಡ್ ನಟಿ ಕಂಗನಾ ರಣಾವತ್ ಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಈ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿರುವ ಅವರು, ಕಳೆದ ಕೆಲವು ದಿನಗಳಿಂದ ನನಗೆ ಸುಸ್ತು, ದೇಹ ಬಳಲಿದಂತೆ ಅನಿಸುತ್ತಿತ್ತು. ಹಾಗೂ ಕಣ್ಣು ಉರಿಯುತ್ತಿತ್ತು, ನನ್ನೂರು ಹಿಮಾಚಲಕ್ಕೆ ಹೋಗುವ ಆಸೆ ಇದೆ. ಹೀಗಾಗಿ ನಿನ್ನೆ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ, ಇಂದು ವರದಿ ಪಾಸಿಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಕೊರೊನಾಗೆ ಯಾರೂ ಹೆದರಬೇಡಿ, ನೀವು ಅದಕ್ಕೆ ಹೆದರಿದರೆ, ಅದು ನಿಮ್ಮನ್ನು ಹೆದರಿಸುತ್ತದೆ. ಎಲ್ಲರೂ ಒಟ್ಟಾಗಿ ಕೋವಿಡ್-19 ವಿರುದ್ಧ ಹೋರಾಡಿ ಓಡಿಸೋಣ ಎಂದು ಬರೆದುಕೊಂಡಿದ್ದಾರೆ.