‘ಬಿಗ್ ಬಾಸ್’ ಮನೆಯಲ್ಲಿ ಜಗಳಗಳು, ಕಿತ್ತಾಟಗಳು ಕಾಮನ್. ಅದೇ ರೀತಿ ರೊಮ್ಯಾನ್ಸ್ ಕೂಡ ಇಲ್ಲಿ ಸರ್ವೇ ಸಾಮಾನ್ಯ. ಕೆಲವೊಮ್ಮೆ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ಮಿತಿಮೀರುತ್ತದೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ 2’ನಲ್ಲಿ ಹಾಗೆಯೇ ಆಗಿದೆ. ಅರ್ಧ ನಿಮಿಷಕ್ಕೂ ಅಧಿಕ ಕಾಲ ಆಕಾಂಕ್ಷ ಪುರಿ ಹಾಗೂ ಜದ್ ಹದೀದ್ ಅವರು ಲಿಪ್ ಲಾಕ್ ಮಾಡಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷ ಮತ್ತು ಜದ್ ಏಕಾಂತದಲ್ಲಿ ಕುಳಿತ್ತಿದ್ದರು. ಮತ್ತೊಂದು ಕಡೆ ಪೂಜಾ ಭಟ್ ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಹೀಗಿರುವಾಗಲೇ ಅವಿನಾಶ್ ಸಚ್ದೇವ್ ಅವರು ‘ಜದ್ಗೆ ಆಕಾಂಕ್ಷ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಈ ಬೆನ್ನಲ್ಲೇ ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಪೂಜಾ ಭಟ್ ಮಾತ್ರ ಇರಿಸುಮುರುಸುಗೊಂಡರು. ನಿಲ್ಲಿಸಿ ನಿಲ್ಲಿಸಿ ಎಂದು ಕೂಗಿದರು. ಉಳಿದವರೆಲ್ಲರೂ ಇದನ್ನು ಎಂಜಾಯ್ ಮಾಡುತ್ತಿದ್ದರು.
ಸಚ್ ದೇವ್ ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ ನಲ್ಲೇ ಇದ್ದರು.
ಹಿಂದಿ ಬಿಗ್ ಬಾಸ್ ಮನೆಯಲ್ಲಿ ಏನು ಆಗಬಾರದು. ಇದೊಂದು ಫ್ಯಾಮಿಲಿ ಶೋ, ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದಾರೆ. ಆದರೆ, ಈ ರೀತಿಯ ಘಟನೆಗಳು ನಡೆದರೆ ಅದು ಫ್ಯಾಮಿಲಿ ಶೋ ಹೇಗಾಗುತ್ತದೆ ಎಂಬುದು ಅನೇಕರ ಪ್ರಶ್ನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.










