ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಈ ವಾರವೂ ಪಾಲ್ಗೊಳ್ಳಲ್ಲ ಕಿಚ್ಚ ಸುದೀಪ್..!

133
firstsuddi

ಬೆಂಗಳೂರು : ಈ ವಾರವು ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಗೆ ಪಾಲ್ಗೊಳ್ಳುವುದಿಲ್ಲ ಎಂದು ಕಿಚ್ಚ ಸುದೀಪ್ ಅವರು ಟ್ಟಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುದೀಪ್ ಅವರು, ನಾನು ಈ ವಾರದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ಮಿಸ್ ಮಾಡಿಕೊಳ್ಳುತ್ತಿದ್ದು, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಇನ್ನೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಶೂಟಿಂಗ್ ಕ್ಯಾನ್ಸಲ್ ಮಾಡಿ, ನನ್ನ ನಿರ್ಧಾರವನ್ನು ಸುಲಭ ಮಾಡಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನನಗಾಗಿ ಪ್ರಾರ್ಥಿಸಿದ ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಕಳೆದ ವಾರ ಅನಾರೋಗ್ಯದ ಕಾರಣದಿಂದಾಗಿ ವೀಕೆಂಡ್ ಎಪಿಸೋಡ್ ಗೆ ಕಿಚ್ಚ ಸುದೀಪ್ ಅವರು ಭಾಗಿಯಾಗಿರಲಿಲ್ಲ. ಅನಾರೋಗ್ಯದ ಕಾರಣದಿಂದಾಗಿ ವಿಶ್ರಾಂತಿಯ ಅಗತ್ಯವಿದ್ದು ಈ ವಾರವೂ ಸುದೀಪ್ ಅವರು ಎಪಿಸೋಡ್ ಗೆ ಗೈರಾಗಲಿದ್ದಾರೆ. ದೊಡ್ಡ ಮನೆಯಿಂದ ಈ ವಾರ ಯಾರು? ಹೇಗೆ? ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.