ಬೆಂಗಳೂರು : ಇಂದು ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ. 2023-24ನೇ ಸಾಲಿನಲ್ಲಿ 11,157.83 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ಬೆಳಗ್ಗೆ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ ಅಥವಾ ಟೌನ್ ಹಾಲ್ ನಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಉಪಸ್ಥಿತಿಯಲ್ಲಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಬಜೆಟ್ ಮಂಡಿಸಿದ್ದಾರೆ.
ಮೂಲಭೂತ ಸೌಕರ್ಯಗಳಾದ ರಸ್ತೆ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ನಗರದ ಸೌಂದರ್ಯೀಕರಣ ಹಾಗೂ ಆರೋಗ್ಯ, ಶಿಕ್ಷಣ ವಿಭಾಗಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.
• ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕೆ 210 ಕೋಟಿ
• ಯಲಹಂಕ ಮೇಲ್ಸೇತುವೆ ಗ್ರೇಡ್ ಸೆಪರೇಟರ್ ಗೆ 60 ಕೋಟಿ ರೂ.
• ಹೂಡಿ ಜಂಕ್ಷನ್, ಐಟಿಪಿಎಲ್, ಬಿಗ್ ಬಜಾರ್ ಜಂಕ್ಷನ್, ಹೋಪ್ ಫಾರಂ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 124 ಕೋಟಿ ರೂ.
• ಮಿನರ್ವ ಜಂಕ್ಷನ್ ಗ್ರೇಡ್ ಸೆಪರೇಟರ್ ಗೆ 137 ಕೋಟಿ ರೂಪಾಯಿ
• ಹಳೆ ಮದರಾಸು ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 104 ಕೋಟಿ
• ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ ರೂ. ಮೀಸಲು
• ಒತ್ತುವರಿ ತೆರವುಗೊಳಿಸಲು ಪ್ರತಿ ವಲಯಕ್ಕೆ 1 ಕೋಟಿ ರೂಪಾಯಿ
• ಅನಧಿಕೃತ ಕಟ್ಟಡ ತೆರವುಗೊಳಿಸಲು 10 ಕೋಟಿ ರೂ. ಮೀಸಲು
• ಕಸಾಯಿಖಾನೆ ನಿರ್ವಹಣೆಗಾಗಿ 1 ಕೋಟಿ ರಪಾಯಿ ಮೀಸಲು
• ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂಪಾಯಿ
• ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣಕ್ಕಾಗಿ 210 ಕೋಟಿ ರೂ.
• ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ
• ಬೀದಿ ಮರಗಳ ನೆಡುವಿಕೆಗೆ ಮತ್ತು ನಿರ್ವಹಣೆಗಾಗಿ 40 ಕೋಟಿ ರೂಪಾಯಿ ಮೀಸಲು
• ರಸ್ತಡ ಚರಂಡಿ, ಪಾದಚಾರಿ ಮಾರ್ಗ ರಿಪೇರಿ ಹಾಗೂ ನಿರ್ವಹಣೆಗೆ 243 ವಾರ್ಡ್ ಗಳಿಗೂ ತಲಾ 30 ಲಕ್ಷ
• ಈಗಾಗಲೇ ನಗರದಲ್ಲಿ ಇರುವ 42 ಮೇಲ್ಸೇತುವೆ, 28 ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ
• ರಸ್ತೆ ಗುಂಡಿ ಮುಚ್ಚುವಿಕೆಗೆ ತಲಾ 15 ಲಕ್ಷ
• ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ 25 ಲಕ್ಷ
• ಪ್ರವಾಸೋದ್ಯಮಕ್ಕೆ 180 ಕೋಟಿ ಮೀಸಲಿಟ್ಟಿದ್ದು, ಕೆಂಪಾಂಬುದಿಕೆರೆ, ಸ್ಯಾಂಕಿ ಕೆರೆ, ಹಲಸೂರು ಕೆರೆ ಪ್ರವಾಸಿ ಕಾರಿಡಾರ್ ನಿರ್ಮಾಣ
• 50 ಕೋಟಿ ವೆಚ್ಚದಲ್ಲಿ 10 ಹೊಸ ಸಿಟಿ ಪ್ಲಾಜಾ ಗಳನ್ನು ಜನವಸತಿ ಪ್ರದೇಶಗಳಲ್ಲಿ ನಿರ್ಮಾಣ
• 209 ಕೋಟಿ ವೆಚ್ಚದಲ್ಲಿ ಸ್ಥಗಿತಗೊಂಡಿರುವ 4 ತ್ಯಾಜ್ಯ ಶೇಖರಣಾ ಕೇಂದ್ರಗಳಲ್ಲಿ ಜೈವಿಕ ಗಣಿಗಾರಿಕೆ ಮಾಡಿ 22 ಲಕ್ಷ
• ಮನುಷ್ಯ – ಪ್ರಾಣಿ ಸಮನ್ವಿತ ರೋಗ ನಿಯಂತ್ರಣಕ್ಕೆ 5 ಕೋಟಿ ವೆಚ್ಚದಲ್ಲಿ ಒಂದೇ ಆರೋಗ್ಯ ಯೋಜನೆ ಅಡಿ ಹೈಟೆಕದ ಲ್ಯಾಬೋರೇಟರಿ ಹಾಗೂ ಮೆಟ್ರೋಪಾಲಿಟನ್ ನಿಗಾ ಕೇಂದ್ರ
• ಒತ್ತುವರಿ ತೆರವುಗೊಳಿಸಲು ವಲಯಕ್ಕೆ 1 ಕೋಟಿಯಂತೆ ಒಟ್ಟು 8 ಕೋಟಿ
• ಅನಧಿಕೃತ ಕಟ್ಟಡ ತೆರವುಗೊಳಿಸಲು 10 ಕೋಟಿ
• ಕಸಾಯಿಖಾನೆಗಳ ನಿರ್ವಹಣೆಗಾಗಿ 1 ಕೋಟಿ
• ಆಡಳಿತಾಧಿಕಾರಿಗಳ ವಿವೇಚನೆಗೆ 100 ಕೋಟಿ
• ಮುಖ್ಯ ಆಯುಕ್ತರ ವಿವೇಚನೆಗೆ 50 ಕೋಟಿ
• ಬೆಂಗಳೂರು ಉಸ್ತುವಾರಿ ಮಂತ್ರಿಗಳ ವಿವೇಚನೆಗೆ 250 ಕೋಟಿ ಮೀಸಲು.
• ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆಗೆ 700 ಕೋಟಿ ಸಹಾಯನುದಾನ
• ಬೀದಿ ನಾಯಿಗಳ ನಿರ್ವಹಣೆಗೆ 20 ಕೋಟಿ ಮೀಸಲು
• ಮರಗಳ ಗಣತಿಗಾಗಿ 4 ಕೋಟಿ
• ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂ ನೀಡಲು 24 ಕೋಟಿ
• ಇಂದಿರಾ ಕ್ಯಾಂಟೀನ್ ಗೆ 50 ಕೋಟಿ ಮೀಸಲು
ಪಾಲಿಕೆ ಅಧಿಕಾರಿ ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪ್ರತಿ ವರ್ಷ ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಅದಕ್ಕೆ 2 ಲಕ್ಷ ರೂ. ಮೊತ್ತದ ಪುರಸ್ಕಾರ ನಿಗದಿ ಮಾಡಲಾಗಿದೆ.










