ಬೆತ್ತಲೆ ಫೋಟೋ ನನ್ನದಲ್ಲ : ವಿಚಾರಣೆ ವೇಳೆ ರಣವೀರ್ ಸಿಂಗ್ ಹೇಳಿಕೆ…

56
firstsuddi

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮ್ಯಾಗಜೀನ್ ಒಂದರ ಮುಖಪುಟಕ್ಕಾಗಿ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಯಿತು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಎನ್.ಜಿ.ಓ ಸಂಸ್ಥೆಯು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಣವೀರ್ ಸಿಂಗ್ ಮೇಲೆ ದೂರು ದಾಖಲಾದ ನಂತರ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡುವಂತೆ ಕಳೆದ ತಿಂಗಳು ನೋಟಿಸ್ ಕಳುಹಿಸಲಾಗಿತ್ತು. ಆದರೆ ತಾವು ಊರಲ್ಲಿ ಇರದೇ ಇರುವ ಕಾರಣಕ್ಕಾಗಿ ಹಾಜರಾಗಲು ಆಗುತ್ತಿಲ್ಲ. ಮುಂಬೈಗೆ ಬಂದ ತಕ್ಷಣವೇ ಹಾಜರಾಗುವುದಾಗಿ ತಿಳಿಸಿದ್ದಾರೆ. ಆಗಸ್ಟ್ 29 ರಂದು ಪೊಲೀಸ್ ಠಾಣೆಗೆ ಅವರು ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ತನಿಖಾಧಿಕಾರಿಯ ಮುಂದೆ ಬೆತ್ತಲಾಗಿರುವ ಫೋಟೋ ನನ್ನದಲ್ಲ ಎಂದು ರಣವೀರ್ ಸಿಂಗ್ ಹೇಳಿಕೆ ನೀಡಿದ್ದಾರಂತೆ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ. ಅದನ್ನು ವೈರಲ್ ಮಾಡಲಾಗಿದೆ. ಆ ಫೋಟೋದಲ್ಲಿ ಇರುವುದು ನಾನಲ್ಲ ಎಂದು ತಿಳಿಸಿದ್ದಾರಂತೆ.